Ticker

6/recent/ticker-posts

Ad Code

ಮತದಾನಕ್ಕೆ ಗುರುತಿನ ಚೀಟಿ ಇಲ್ಲದವರು ಇದನ್ನು ಬಳಸಬಹುದೆಂದು ಚು.ಆಯೋಗ ನಿರ್ದೇಶನ

 

ಕಾಸರಗೋಡು : ಕೇರಳ ವಿಧಾನ ಸಭಾ ಕ್ಷೇತ್ರದ ಮತದಾನಕ್ಕೆ ಸರ್ವ ಸಜ್ಜೀಕರಣಗಳು ಪೂರ್ಣಗೊಂಡಿದ್ದು ಮತದಾರರನ್ನು ಗುರುತಿಸಲು ಫೋಟೋ ಹೊಂದಿರುವ ಮತದಾರರ ಗುರುತಿನ ಚೀಟಿ ಮುಖ್ಯ ದಾಖಲೆಯಾಗಿದೆ. ಮತದಾರರ ಗುರುತಿನ ಚೀಟಿಯನ್ನು ತೋರಿಸಲು ಸಾಧ್ಯವಾಗದವರು ಈ ಬಾರಿ  ಚುನಾವಣಾ ಆಯೋಗವು ಅನುಮೋದಿಸಿದ ದಾಖಲೆಗಳನ್ನು ಗುರುತಿನ ಪುರಾವೆಯಾಗಿ ಬಳಸಬಹುದು ಎಂದು ಸೂಚಿಸಲಾಗಿದೆ.  ಈ ಕೆಳಗಿನ ಗುರುತಿನ ಚೀಟಿಗಳನ್ನು ತೋರಿಸಿದರೂ ಸಹ ಮತ ಚಲಾಯಿಸಬಹುದು. 

ಆಧಾರ್ ಕಾರ್ಡ್, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ನೀಡಲಾದ ಫೋಟೋ ಗುರುತಿನ ಚೀಟಿ, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಭಾರತೀಯ ರಿಜಿಸ್ಟ್ರಾರ್ ಜನರಲ್ (RGI) ನೀಡಿದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಭಾರತೀಯ ಪಾಸ್‌ಪೋರ್ಟ್‌ಗೆ ನೀಡಲಾದ ಸ್ಮಾರ್ಟ್ ಕಾರ್ಡ್, ಫೋಟೋ ಹೊಂದಿರುವ ಪಿಂಚಣಿ ದಾಖಲೆಗಳನ್ನು ಬಳಸಬಹುದಾಗಿದೆ ಎಂದು ಸೂಚಿಸಲಾಗಿದೆ.


ಜಾಹೀರಾತು


Post a Comment

0 Comments