Ticker

6/recent/ticker-posts

Ad Code

ಕಾಳ್ಯಂಗಾಡು ಕ್ಷೇತ್ರದಲ್ಲಿ ವಿಜೃಂಭಣೆಯ ಬ್ರಹ್ಮಕಲಶೋತ್ಸವಕ್ಕಾಗಿ ಚಪ್ಪರ ಮುಹೂರ್ತ

 

ಕಾಸರಗೋಡು :  ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಇದೇ ಬರುವ ಏಪ್ರಿಲ್ 26 ರಿಂದ ಮೇ 2 ರ ತನಕ ಜರಗಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ ಕ್ಷೇತ್ರದ ಧರ್ಮದರ್ಶಿ ನಾರಾಯಣ ಕಾಳ್ಯಂಗಾಡ್ ಮತ್ತು ಅರ್ಚಕರಾದ ಯೋಗೀಶ್ ಅವರ ಕಾರ್ಮಿಕತ್ವದಲ್ಲಿ ಚಪ್ಪರ ಸಮಿತಿಯ ಲವ ಮೀಪುಗುರಿ, ಸುರೇಶ್ ಅಭಿನಂದನ್ ಅವರ ನೇತೃತ್ವದಲ್ಲಿ ಜರಗಿತು. 

ಈ ಸಂದರ್ಭದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾl ಕೆ.ಎನ್ ವೆಂಕಟ್ರಮಣ ಹೊಳ್ಳ, ಕ್ಷೇತ್ರ ಮೊಕ್ತೇಸರ  ಅಚ್ಚುತ ಕಾಳ್ಯಂಗಾಡು, ‌ಪ್ರಧಾನ ಕಾರ್ಯದರ್ಶಿ  ದಯಾನಂದ ಕೊಳ್ಕೆಬೈಲು, ಉಪಾಧ್ಯಕ್ಷ ಮಿಥುನ್ ಕಾಳ್ಯಂಗಾಡ್, ಕಾರ್ಯದರ್ಶಿ ರಂಜಿತ್ ಮನ್ನಿಪ್ಪಾಡಿ, 

ಪುಷ್ಪಮ್ಮ ಕಾಳ್ಯಂಗಾಡ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕೊರಕೋಡ್, ಮಹಿಳಾ ಸಂಘ ಕಾರ್ಯದರ್ಶಿ  ದೀಪಾ ರಾಜೇಶ್, ಪ್ರಶಾಂತ್ ಹಾಗೂ ವಿವಿಧ ಉಪಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.


ಜಾಹೀರಾತು


Post a Comment

0 Comments