Ticker

6/recent/ticker-posts

Ad Code

ಎಣ್ಮಕಜೆಯಲ್ಲಿ ಸಿಪಿಐಎಂ ತೊರೆದು ಯಾರೂ ಬಿಜೆಪಿ ಸೇರ್ಪಡೆಯಾಗಿಲ್ಲ : ಎಡರಂಗದ ಸ್ಪಷ್ಟನೆ

 

ಪೆರ್ಲ: ನಿನ್ನೆ ಪೆರ್ಲ ಪೇಟೆಯಲ್ಲಿ ನಡೆದ ಮಂಜೇಶ್ವರ ವಿಧಾನ ಸಭಾ ಎನ್ ಡಿ ಎ ಅಭ್ಯರ್ಥಿ ರೋಡ್ ಶೋ ಸಂದರ್ಭ  ಸಿಪಿಐಎಂ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ ಎಂಬ ಪ್ರಚಾರ ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಜನರನ್ನು ದಾರಿ ತಪ್ಪಿಸುವ ಗುರಿಯನ್ನು ಬಿಜೆಪಿ ನಡೆಸಿದೆ ಎಂದು ಸಿಪಿಐಎಂ ತಿಳಿಸಿದೆ. 

ಸಿಪಿಐಎಂ ಎಣ್ಮಕಜೆ ಸ್ಥಳೀಯ ಸಮಿತಿಯ ಅಡಿಯಲ್ಲಿ ಪ್ರಸ್ತುತ  ಪಕ್ಷದ ಸದಸ್ಯರು ಅಥವಾ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳನ್ನು ಬಳಸಿಕೊಂಡು ಇಂತಹ ರಾಜಕೀಯ ನಾಟಕಗಳು ಬಿಜೆಪಿಯ ಸಾಂಸ್ಥಿಕ ದೌರ್ಬಲ್ಯ ಮತ್ತು ವಂಚನೆಯನ್ನು ಬಹಿರಂಗಪಡಿಸುತ್ತವೆ. ಸುಳ್ಳು ಪ್ರಚಾರದ ಮೂಲಕ ರಾಜಕೀಯ ಲಾಭ ಪಡೆಯಬಹುದು ಎಂಬುದು ಬಿಜೆಪಿಯ ಭ್ರಮೆ ಮಾತ್ರ. ಸತ್ಯಗಳನ್ನು ಗುರುತಿಸುವ ಜನರು ಖಂಡಿತವಾಗಿಯೂ ಇಂತಹ ನಕಲಿ ಸುದ್ದಿಗಳನ್ನು ತಿರಸ್ಕರಿಸುತ್ತಾರೆ ಎಂದು ಸಿಪಿಐಎಂ ಎಣ್ಮಕಜೆ ವ ಲೋಕಲ್  ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.


ಜಾಹೀರಾತು


Post a Comment

0 Comments