Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಣಜದ ಹುಳುಗಳ ದಾಳಿಗೆ ಗಬ್ಬದ ಹಸು ಬಲಿ: ರಕ್ಷಣೆಗೆ ಧಾವಿಸಿದ ಮೂವರಿಗೆ ಗಾಯ

ಕಾಞಂಗಾಡ್: ಕಣಜದ ಹುಳಗಳ ದಾಳಿಗೆ ಗರ್ಭಿಣಿ ಹಸುವೊಂದು ಮೃತಪಟ್ಟಿದ್ದು, ಹಸುವನ್ನು ರಕ್ಷಿಸಲು ಧಾವಿಸಿದ ಮೂವರು ಗಾಯಗೊಂಡ ಘಟನೆ ಕಾಞಂಗಾಡ್‌ನ ಅರಯಿ ಪ್ರದೇಶದಲ್ಲಿ ನಡೆದಿದೆ.

ಅರಯಿ ಗದ್ದೆಯಲ್ಲಿ ಮೇಯಲು ಕಟ್ಟಲಾಗಿದ್ದ ಹಸುವಿನ ಮೇಲೆ ಏಕಾಏಕಿ ಕಣಜದ ಹುಳಗಳು ದಾಳಿ ನಡೆಸಿವೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಗರ್ಭಿಣಿ ಹಸು ಮೃತಪಟ್ಟಿದೆ.

ಹಸುವನ್ನು ರಕ್ಷಿಸಲು ಮುಂದಾದವರ ಮೇಲೂ ಕಣಜದ ಹುಳಗಳು ದಾಳಿ ನಡೆಸಿದ್ದು, ಅರಯಿಯ ನೌಶಾದ್ (48), ಇಸ್ಮಾಯಿಲ್ (55) ಹಾಗೂ ಕಡವತ್ತಿನ ಕುಟ್ಯನ್ (77) ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement