Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡು ನಗರಸಭೆಯ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ನಗರಸಭೆಯ ಉದ್ಯೋಗಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಞಂಗಾಡ್, ಪಡನ್ನಕ್ಕಾಡ್, ಕರುವಳಂ ಮೂಲದವರೂ, ಪ್ರಸ್ತುತ ನೀಲೇಶ್ವರ ತಟ್ಟಾಚ್ಚೇರಿಯಲ್ಲಿ ವಾಸವಾಗಿದ್ದ ರಮ್ಯಾ (40) ಮೃತಪಟ್ಟವರು.

ಇಂದು ಬೆಳಿಗ್ಗೆ ಮನೆಯ ಎರಡನೇ ಮಹಡಿಯಲ್ಲಿ ರಮ್ಯಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕೋಝಿಕ್ಕೋಡ್ ಫರೂಖ್ ನಗರಸಭೆಯ ಕಾರ್ಯದರ್ಶಿಯಾಗಿರುವ ಶ್ರೀಜಿತ್ ಅವರ ಪತ್ನಿಯಾಗಿದ್ದಾರೆ. ಮನೆಯಲ್ಲಿ ರಮ್ಯಾ ಮತ್ತು ಅವರ ಕಿರಿಯ ಮಗು ಮಾತ್ರ ವಾಸವಾಗಿದ್ದರು.

ಬೆಳಿಗ್ಗೆ ಮಗು ಟ್ಯೂಷನ್ ತರಗತಿಗೆ ಹೋಗಿತ್ತು. ಮರಳಿ ಬಂದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಕ್ಷಣ ಮಗು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದೆ. ಬಳಿಕ ಸ್ಥಳೀಯರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ರಮ್ಯಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ವಿಷಯ ತಿಳಿದು ನೀಲೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement