ಮುಳ್ಳೇರಿಯ: ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದ ಶ್ರೇಯಸ್ (11) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಶಾಲಾ ಅಧಿಕೃತರು, ಊರವರು ಸೇರಿ ಚಿಕಿತ್ಸಾ ನಿಧಿ ಸಂಗ್ರಹ ನಡೆಸುತ್ತಿದ್ದಂತೆಯೇ ಶ್ರೇಯಸ್ ನಿಧನರಾದುದು ನಾಡಿನಲ್ಲಿ ಶೋಕ ಸಾಗರ ಸೃಷ್ಟಿಸಿದೆ.
ಪಾರ್ಥಕೊಚ್ಚಿ ನಿವಾಸಿ ಶರತ್- ಅನುಪಮ ದಂಪತಿಯ ಪುತ್ರನಾದ ಶ್ರೇಯಸ್ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿದ್ದನು. ಈತನ ಇನ್ನೋರ್ವ ತಮ್ಮ ಭುವಿ ಸಹ ಇದೇ ಶಾಲೆಯಲ್ಲಿ ಕಲಿಯಿತ್ತಿದ್ದಾನೆ. ಇತ್ತೀಚೆಗಷ್ಟೆ ಶ್ರೇಯಸ್ ನಿಗೆ ಅಸೌಖ್ಯ ಕಾಣಿಸಿಕೊಂಡಿದ್ದು ಕೂಡಲೇ ತಜ್ಞ ವೈದ್ಯರನ್ನು ಬೇಟಿಯಾಗಿ ತಪಾಸಣೆ ನಡೆಸಿದಾಗ ಕಿಡ್ನಿ ಸಂಬಂಧ ಖಾಯಿಲೆ ಎಂದು ತಿಳಿಯಿತು. ಅದರಂತೆ ಶ್ರೇಯಸ್ ಚಿಕಿತ್ಸಾ ನಿಧಿ ಸಂಗ್ರಹವೂ ಆರಂಭಗೊಂಡಿತು. ಸ್ಥಳೀಯರು ಸೇರಿ ಮಗುವಿನ ಜೀವ ಉಳಿಸುವ ಪಣ ತೊಟ್ಟು ಹಣ ಸಂಗ್ರಹಿಸಿದ್ದರು. ಈ ಮದ್ಯೆ ಶ್ರೇಯಸ್ ಗೆ ಅಸೌಖ್ಯ ಕಾಣಿಸಿಕೊಂಡಿದ್ದು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದ ಹಿನ್ನೆಲೆಯಲ್ಲಿ ಶ್ರೇಯಸ್ ಸೋಮವಾರ ಮದ್ಯಾಹ್ನ ಕೊನೆಯುಸಿರೆಳೆದನು.

0 Comments