Ticker

6/recent/ticker-posts

Ad Code

ಇರಿಯಣ್ಣಿ ಪರಿಸರದಲ್ಲಿ ಸತತ ಮೂರು ದಿನಗಳಿಂದ ಚಿರತೆ ಪ್ರತ್ಯಕ್ಷ


 ಮುಳಿಯಾರು: ಅಲ್ಪ ಕಾಲದ ವಿರಾಮದ ನಂತರ ಮುಳಿಯಾರು ಪರಿಸರದಲ್ಲಿ ಮತ್ತೆ ಚಿರತೆ ಭೀತಿ ಉಂಟಾಗಿದೆ  ಇರಿಯಣ್ಣಿಯಲ್ಲಿ ಮೂರನೇ ದಿನವೂ ಚಿರತೆ ಕಾಣಿಸಿಕೊಂಡಿದೆ. ಇಲ್ಲಿನ ಉದಯ ಎಂಬವರ ಮನೆಯಂಗಳಕ್ಕೆ ರಾತ್ರಿ ವೇಳೆ ಚಿರತೆ ಆಗಮಿಸಿದೆ. ಉದಯ ಅವರು ಹೊರಗೆ ಬಂದು ನೋಡಿದಾಗ ಚಿರತೆ ನಾಯಿಯನ್ನು ಕಚ್ಚಿಕೊಂಡು ಹೋಗುತ್ತಿತ್ತು. ಇರಿಯಣ್ಣಿ ತೀಯಡ್ಕ ಪರಿಸರದಲ್ಲಿ ಸೋಮವಾರ ಚಿರತೆ ಕಂಡು ಬಂದಿದೆ. ರಬ್ಬರ್ ಟಾಪಿಂಗ್ ಕಾರ್ಮಿಕ ಜ್ಯೋತಿಷ್ ಎಂಬವರು ಚಿರತೆಯನ್ನು ಕಂಡು ಹೆದರಿ ಓಡಿದ್ದಾರೆ.  ಅಲ್ಪ ಕಾಲದ ವಿರಾಮದ ಬಳಿಕ ಮತ್ತೆ  ಚಿರತೆ ಕಂಡು ಬಂದಿರುವುದು ಜನರಲ್ಲಿ ಭೀತಿ ಉಂಟುಮಾಡಿದೆ. ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ‌ ಮಾಹಿತಿ ನೀಡಿದ್ದಾರೆ

Post a Comment

0 Comments