Ticker

6/recent/ticker-posts

ಇತಿಹಾಸ ಪ್ರಸಿದ್ದ ಕುಳದಪಾರೆ ಶ್ರೀ ವಿಷ್ಣುಮೂರ್ತಿ ಒತ್ತೆಕೋಲವು ಎಪ್ರಿಲ್ 21, 22 ರಂದು


 ಬೆಳ್ಳೂರು: ಇತಿಹಾಸ ಪ್ರಸಿದ್ದವಾದ ಕುಳದಪಾರೆ ಶ್ರೀ ವಿಷ್ಣುಮೂರ್ತಿ ಒತ್ತೆಕೋಲವು  ಎಪ್ರಿಲ್ 21, 22 ಎಂಬೀ ದಿನಗಳಲ್ಲಿ ಜರಗಲಿರುವುದು. ಕಾರ್ಯಕ್ರಮದ ಅಂಗವಾಗಿ 21 ಸೋಮವಾರ ಬೆಳಗ್ಗಿನಿಂದ ಮೇಲೇರಿ ಸೇರಿಸುವುದು, ಸಾಯಂಕಾಲ 7 ಕ್ಕೆ ಕುಳದ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು,  8 ಗಂಟೆಗೆ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ 8.30 ರಿಂದ ಕುಳದಪಾರೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 9 ರಿಂದ ನೃತ್ಯ ವೈವಿದ್ಯ, ರಾತ್ರಿ 11 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಾಟ್ಟ,

ರಾತ್ರಿ  1.30 ರಿಂದ ಅಭಿನಯ ಕಲಾ ತಂಡ ಕಾಸರಗೋಡು ಇವರು ಅಭಿನಯಿಸುವ ಸಾಮಾಜಿಕ ಹಾಸ್ಯಮಯ ನಾಟಕ "ಅಣ್ಣೆ ಬರುವೆನಾ"  ಎಪ್ರಿಲ್ 22 ಮಂಗಳವಾರ ಪ್ರಾತಃಕಾಲ 5 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ, 7 ರಿಂದ  ಅರಶಿನ ಪ್ರಸಾದ  ಸ್ವೀಕಾರ, ಭಂಡಾರ ನಿರ್ಗಮನ ಇರುವುದು.

Post a Comment

0 Comments