ಕಾಸರಗೋಡು: ಪೆರುಂಬಳ ಸೇತುವೆಯಿಂದ ಚಂದ್ರಗಿರಿ ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಬಾಫಾಖಿ ನಗರ ನಿವಾಸಿ ಕೆ.ಎಂ.ಶರೀಫ್(45) ಆತ್ಮಹತ್ಯೆಗೈದ ವ್ಯಕ್ತಿ. ಇಂದು ಶುಕ್ರವಾರ ಬೆಳಗ್ಗೆ ಶರೀಪರ ಮೃತದೇಹ ಸೇತುವೆ ಬಳಿ ಪತ್ತೆಯಾಗಿದೆ.
ನಿನ್ನೆ (ಗುರುವಾರ) ಬೆಳಗ್ಗೆ 11 ಗಂಟೆಯ ವೇಳೆ ಶರೀಫರಬ ಸ್ಕೂಟರ್, ಚಪ್ಪಲಿ ಎಂಬಿವು ಸೇತುವೆಯ ಬಳಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶರೀಫ್ ಹೊಳೆಗೆ ಹಾರಿರಬೇಕೆಂದು ಶಂಕಿಸಲಾಯುತು. ಮಾಹಿತಿ ತಿಳಿದು ಅಗ್ನಿಶಾಮಕ ದಳ, ಊರವರು ನಿನ್ನೆ ಹುಡುಕಾಟ ನಡೆಸಿದ್ದರು. ಇಂದು ಹುಡುಕಾಟ ಆರಂಭಗೊಳ್ಳುತ್ತಿದ್ದಂತೆಯೇ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
0 Comments