Ticker

6/recent/ticker-posts

ಕಾಂಕ್ರೀಟ್ ಕಂಬ ಮೈ ಮೇಲೆ ಬಿದ್ದು ನಾಲ್ಕು ವರ್ಷದ ಬಾಲಕ‌ ದಾರುಣ ಮೃತ್ಯು


 ಕಾಂಕ್ರೀಟ್ ಕಂಬ ಮೈ ಮೇಲೆ ಬಿದ್ದು ನಾಲ್ಕು ವರ್ಷದ ಬಾಲಕ‌ ಮೃತಪಟ್ಟ ದಾರುಣ ಘಟನೆ ನಡೆದಿದೆ. ಪತ್ತನಂತಿಟ್ಟ ಕೊನ್ನಿಯಲ್ಲಿನ ಆನೆ ವಿಹಾರಕೇಂದ್ರ ವೀಕ್ಷಿಸಲು ಆಗಮಿಸಿದ ತಂಡದಲ್ಲಿದ್ದ ಬಾಲಕ ಅಭಿರಾಂ ಮೃತಪಟ್ಟ ಬಾಲಕ. ಇಂದು (ಶುಕ್ರವಾರ) ಮದ್ಯಾಹ್ನ ಈ ಘಟನೆ ನಡೆದಿದೆ.

 ಮಗು ಆಟವಾಡುವ ಮಧ್ಯೆ ಕಾಂಕ್ರೀಟ್ ಕಂಬವನ್ನು ಹಿಡಿದು ಸುತ್ತು ಬಂದನೆನ್ನಲಾಗಿದೆ. ಈ ವೇಳೆ ಕಂಬ ಬುಡದಿಂದಲೇ ಕಿತ್ತು ಬಾಲಕನ ಮೇಲೆ ಬಿದ್ದಿದೆ.  ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ.

ಇಂದು ಬೆಳಗ್ಗೆ ತಾಯಿ ಹಾಗೂ ಇತರ ಸಂಬಂಧಿಕರ ಜತೆ‌ ಕಲ್ಲೇರಿ ಅಯ್ಯಪ್ಪನ್ ಕಾವು ಕ್ಷೇತ್ರಕ್ಕೆ ಬೇಟಿ ನೀಡಿ ಅನಂತರ ಆನೆ ವೀಕ್ಷಿಸಲೆಂದು ಬಂದಿದ್ದರು. ಕಾಂಕ್ರೀಟ್ ಕಂಬದ ಬುಡ ಗಟ್ಟಿಗೊಳಿಸಿಲ್ಲದ ಕಾರಣ ಅದು ಕಿತ್ತು ಬಂದಿದೆ ಎನ್ನಲಾಗಿದೆ.

Post a Comment

0 Comments