Ticker

6/recent/ticker-posts

ಏ.27ಕ್ಕೆ ಬಂಗ್ರಮಂಜೇಶ್ವರದಲ್ಲಿ "ವಿಶ್ವ ಆರೋಹಂ" ತಂಡದಿಂದ ಉಚಿತ ಶೈಕ್ಷಣಿಕ ಔದ್ಯೋಗಿಕ ಕಾರ್ಯಗಾರ


ಮಂಜೇಶ್ವರ : ಶ್ರೀ ಕಾಳಿಕಾಪರಮೇಶ್ವರಿ‌ ವಿಶ್ವಕರ್ಮ ಸಮಾಜ‌ ಸಭಾ ಮಂಗಳೂರು ಪ್ರಾಂತ್ಯ ಇದರ ನೇತೃತ್ವದಲ್ಲಿ ವಿಶ್ವಕರ್ಮ ಸಮಾಜದ ಔನ್ನತಿಗಾಗಿ ಶ್ರಮಿಸುವ "ವಿಶ್ವ ಆರೋಹಂ" ತಂಡದಿಂದ  ಏ.27ಕ್ಕೆ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಸಭಾ ಭವನದಲ್ಲಿ ಏಕ ದಿನ ಉಚಿತ ಶೈಕ್ಷಣಿಕ ಔದ್ಯೋಗಿಕ ಕಾರ್ಯಗಾರ ಆಯೋಜಿಸಲಾಗಿದೆ. ಎಂಟನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗಿನ‌ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ  ಈ ಕಾರ್ಯಗಾರದಲ್ಲಿ ರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. 

ಅಂದು ಬೆಳಗ್ಗೆ 8.30 ಗಂಟೆಯಿಂದ ವಿದ್ಯಾರ್ಥಿ ನೋಂದಣಿ ಮತ್ತು ಲಘ ಉಪಹಾರ, 9.30 ಗಂಟೆಯಿಂದ ಉದ್ಘಾಟನೆ ಕಾರ್ಯಕ್ರಮ ಜರಗಲಿದೆ. ಐಲ ಚಂದ್ರಶೇಖರ ಆಚಾರ್ಯ ಕೋಟೆಕಾರ್ ದೀಪ ಪ್ರಜ್ವಲನೆಗೈಯುವರು. ಎಸ್.ಕೆ.ವಿ.ಮೋಹನದಾಸ್ ಆಚಾರ್ಯ ಮಂಗಳೂರು, ಎಂ.ಮೋಹನ‌ ಆಚಾರ್ಯ ಕೋಟೆಕಾರ್, ಬಿ.ಎಂ.ಯದುನಂದನ‌ ಆಚಾರ್ಯ,ವಿಜಯಲಕ್ಷ್ಮಿ ಮನೋಹರ ಆಚಾರ್ಯ,ಬಿ.ಎಂ.ಮೋಹನ‌ಚಂದ್ರ ಆಚಾರ್ಯ ಉಪಸ್ಥಿತರಿರುವರು. ಡಾ.ಬಾಲಕೃಷ್ಣ ಬಿ.ಎಂ.ಹೊಸಂಗಡಿ ಮತ್ತು ವಿನೀತ್ ಕುಮಾರ್ ಕೆ.ಎಂ.ಬೆಂಗಳೂರು ದಿಕ್ಸೂಚಿ ಭಾಷಣಗೈಯುವರು

ಬಳಿಕ ಬೆಳಗ್ಗೆ 10 ಗಂಟೆಯಿಂದ ಉದ್ಯಾವರ ಸದ್ಯೋಜಾತ ಆಚಾರ್ಯ ಕೊಲ್ಯ ಅವರಿಂದ ಯೋಗ ಶಿಕ್ಷಣ ತರಬೇತಿ, 10.30ಯಿಂದ ಜೆಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಇನ್ನಾ ಅವರಿಂದ ಪ್ರೇರಣೆಯ ಕಾರ್ಯಗಾರ, ಮಧ್ಯಾಹ್ನ 2 ಗಂಟೆಯಿಂದ ಕೆ.ಮುರಳಿಧರ , ಸುರೇಶ್ ಎಂ.ಎಸ್ ಅವರಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯ ಮಾಹಿತಿ, ಮಧ್ಯಾಹ್ನ 2.30 ಗಂಟೆಯಿಂದ ಡಾ.ಆಶೋಕ್ ಆಚಾರ್ಯ ಸಕಲೇಶಪುರ, ಡಾ.ರವೀಂದ್ರ ಆಚಾರ್ಯ ಹುಬ್ಬಳ್ಳಿ, ಡಾ.ಪ್ರಜ್ವಲ್ ಚಂದ್ರಶೇಖರ್ ಆಚಾರ್ಯ ಕೋಟೆಕಾರ್, ಪ್ರಜ್ಞಾ ಪ್ರಜ್ವಲ್ ಆಚಾರ್ಯ ಕೋಟೆಕಾರ್ ಅವರಿಂದ ವೈದ್ಯಕೀಯ ಶಿಕ್ಷಣ ಮಾಹಿತಿ, ಮಧ್ಯಾಹ್ನ 2.50 ರಿಂದ ಡಾ.‌ಗೋಪಾಲಕೃಷ್ಣ ಆಚಾರ್ಯ ನವದೆಹಲಿ ಮತ್ತು ಅನಂತ ಆಚಾರ್ಯ ಬೆಂಗಳೂರು ಅವರಿಂದ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣದ ಮಾಹಿತಿ,3.30ರಿಂದ ಪುತ್ತೂರು ಮಹೇಶ್ ಪ್ರಸಾದ್ ಆಚಾರ್ಯ ಬೆಂಗಳೂರು, ಅಡ್ಯನಡ್ಕಗಿರೀಶ್ ಆಚಾರ್ಯ ಮಂಗಳೂರು,ಎಂ.ಮೋಹನ ಆಚಾರ್ಯ ಕೋಟೆಕಾರ್, ಐಲ ಚಂದ್ರಶೇಖರ್ ಆಚಾರ್ಯ ಕೋಟೆಕಾರ್ ಅವರಿಂದ ಚಾರ್ಟೆಡ್ ಅಕೌಂಟ್ ಮತ್ತು ಬ್ಯಾಂಕಿಂಗ್ ಮಾಹಿತಿ, ಅಪರಾಹ್ನ 3.50 ಗಂಟೆಯಿಂದ ಎನ್.ಎಸ್.ಪತ್ತಾರ್ ಮಂಗಳೂರು, ಕೆ.ಮನೋಹರ ಆಚಾರ್ಯ ಬೆಂಗಳೂರು, ಚಿದಾನಂದ ಆಚಾರ್ಯ ಮೂವಾಜೆ,ಜೆ.ಪಿ.ಆಚಾರ್ಯ ಕೋಟೆಕಾರ್,ದಿವಾಕರ ಆಚಾರ್ಯ ಕೋಟೆಕಾರ್ ಅವರಿಂದ ಚಿತ್ರ ಕಲೆ ಮತ್ತು ಶಿಲ್ಪ ಕಲೆಗಳ ಮಾಹಿತಿ,ಸಂಜೆ 4.10 ರಿಂದ ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ವಿಜೇತ ಕನ್ನಡಿಗ ಗಣೇಶ್ ಕಾಸರಗೋಡು ಅವರಿಗೆ ಅಭಿನಂದನೆ, ಸಂಜೆ 4.40ರಿಂದ ಸಮಾರೋಪ ಸಮಾರಂಭ ಜರಗಲಿದೆ.

Post a Comment

0 Comments