ಮಂಜೇಶ್ವರ: ಇಲ್ಲಿನ ಅಬಕಾರಿ ಚೆಕ್ ಪೋಸ್ಟ್ ನಲ್ಲಿ 60 ಪವನು ಚಿನ್ನ ವಶಪಡಿಸಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುವ ಸಾರಿಗೆ ಬಸ್ಸಿನಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಯಾವುದೇ ದಾಖಲೆಗಳಿಲ್ಲದ 60 ಪವನು (480.9 ಗ್ರಾಂ) ಚಿನ್ನ ವಶಪಡಿಸಲಾಗಿದೆ. ಚಿನ್ನ ಸಾಗಾಟ ನಡೆಸಿದ ರಾಜಸ್ಥಾನ ನಿವಾಸಿ ಛಗನ್ ಲಾಲ್ ಎಂಬಾತನನ್ನು ಬಂಧಿಸಲಾಗಿದೆ.
ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಕೆ.ಪಿ.ಗಂಗಾಧರನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಿವೆಂಟಿವ್ ಆಫೀಸರ್ ಎಂ.ವಿ.ಜಿಜಿನ್, ಇತರರಾದ ಪಿ.ಕೆ.ಬಾಬುರಾಜನ್, ಸಿ.ವಿಜಯನ್, ಟಿ.ರಾಹುಲ್ ಮೊದಲಾದವರು ಭಾಗವಹಿಸಿದರು. ವಶಪಡಿಸಿದ ಚಿನ್ನ ಹಾಗೂ ಆರೋಪಿಯನ್ನು ಜಿ.ಎಸ್.ಟಿ.ಇಲಾಖೆಗೆ ಹಸ್ತಾಂತರಿಸಲಾಯಿತು. ಚಿನ್ನ ತಲುಪಬೇಕಿದ್ದ ಸ್ಥಳದ ಬಗ್ಗೆಯೂ ತನಿಖೆ ನಡೆದಿದೆ. ಮುಂದಿನ ದಿನಗಳಲ್ಲಿ ವಾಹನ ತಪಾಸಣೆ ಬಿಗುಗೊಳಿಸಲಾಗುವುದು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
0 Comments