Ticker

6/recent/ticker-posts

ಪುತ್ತಿಗೆ ಕಾಂಗ್ರೆಸ್ ನಾಯಕ ಸುಲೈಮಾನ್ ಮೇಲೆ ಸಿಪಿಐಎಂ ಗೂಂಡಾ ದಾಳಿ – ಹರ್ಷಾದ್ ವರ್ಕಾಡಿ ಖಂಡನೆ


ಮಂಜೇಶ್ವರ: ಯುಡಿಎಫ್ ಪುತ್ತಿಗೆ ಪಂಚಾಯತ್ ಅಧ್ಯಕ್ಷರೂ, ಕಾಂಗ್ರೆಸ್ ಮಂಡಲ ಅಧ್ಯಕ್ಷರೂ ಆಗಿರುವ ಸುಲೈಮಾನ್ ಊಜಂಪದವಿಗೆ ಸಿಪಿಐಎಂ ಗೂಂಡಾಗಳು ಹಲ್ಲೆ ಮಾಡಿರುವುದನ್ನು  ಕಾಸರಗೋಡು ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್  ವರ್ಕಾಡಿ  ಖಂಡಿಸಿದ್ದಾರೆ.

ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸುಲೈಮಾನ್ ಅವರನ್ನು  ಸಿಪಿಎಂ ಗೂಂಡಾಗಳು ಏಕಾಏಕಿ ದಾಳಿ ಮಾಡಿದ್ದು,ಇದು  ಫಾಸಿಸ್ಟ್ ಶೈಲಿಯಾಗಿದೆ. ಪುತ್ತಿಗೆಯ ಶಾಂತಿಯುತ ಪರಿಸರವನ್ನು ಹಾಳುಮಾಡಲು ಉದ್ದೇಶಿತ ಷಡ್ಯಂತ್ರವಿದು ಎಂದು ಅವರು ಆರೋಪಿಸಿದರು. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು  ಅವರು ಆಗ್ರಹಿಸಿದರು.

Post a Comment

0 Comments