Ticker

6/recent/ticker-posts

ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ಆಶ್ರಯದಲ್ಲಿ ಯಕ್ಷ ಶತಕ ಮೇ.25 ರಂದು., ಆಮಂತ್ರಣ ಪತ್ರಿಕೆ ಬಿಡುಗಡೆ



ಮಂಜೇಶ್ವರ : ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು, ಮಂಜೇಶ್ವರ ತಂಡ ವಿವಿಧ ಕ್ಷೇತ್ರ, ಸಂಘಗಳ ಹಾಗೂ ವ್ಯಕ್ತಿಗಳ ಸಹಕಾರದೊಂದಿಗೆ ನೂರು ತಾಳಮದ್ದಳೆ ಪ್ರದರ್ಶನ ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಆ ಬಗ್ಗೆ ಸಂಸ್ಥೆಯು "ಯಕ್ಷ ಶತಕ' ಎಂಬ ಕಾರ್ಯಕ್ರಮವನ್ನು ಮೇ 25ನೇ ರವಿವಾರ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಂಡಿದ್ದು ದಿನಪೂರ್ತಿ ಸಂಗೀತ, ತಾಳಮದ್ದಳೆ, ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಯಕ್ಷ ಶತಕ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಜಿಬೈಲು ದೇವಸ್ಥಾನದಲ್ಲಿ, ದೇವಸ್ಥಾನದ ಮೊಕ್ತೇಸರ ಗೋಪಾಲಕೃಷ್ಣ ನಾವಡ ಮಜಿಬೈಲು ಬಿಡುಗುಡೆಗೊಳಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ವಿಷ್ಣು ಯಕ್ಷಬಳಗದ ಸಂಚಾಲಕರಾದ ಹರೀಶ್ ನಾವಡ ಮಜಿಬೈಲು, ಮಮತಾ ನಾವಡ ಮಜಿಬೈಲು, ವಿಶ್ವನಾಥ ಆಳ್ವ ಕರಿಬೈಲು, ಅಣ್ಣಪ್ಪ ಹೆಗ್ಡೆ ಕರಿಬೈಲು, ರವೀಂದ್ರನಾಥ ಶೆಟ್ಟಿ ಕರಿಬೈಲು, ರಾಮಪ್ರಕಾಶ್ ಶೆಟ್ಟಿ ಕರಿಬೈಲು ವೇದಮೂರ್ತಿ ಗಣೇಶ ನಾವಡ ಮೀಯಪದವು, ರಾಜಾರಾಮ ರಾವ್ ಮೀಯಪದವು, ನಾರಾಯಣ ರಾವ್ ಮೂಡಂಬೈಲು, ಯೋಗೀಶ ರಾವ್ ಚಿಗುರುಪಾದೆ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.

Post a Comment

0 Comments