Ticker

6/recent/ticker-posts

ಪುತ್ತಿಗೆ‌ ಮಂಡಲ ಕಾಂಗ್ರೆಸ್ ಅಧ್ಯಕ್ಷನ ಮೇಲೆ‌ ಹಲ್ಲೆ ಖಂಡಿಸಿ ಸೀತಾಂಗೋಳಿಯಲ್ಲಿ‌ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನಾ ಸಭೆ


 ಸೀತಾಂಗೋಳಿ: ಪುತ್ತಿಗೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್ ಊಜಂಪದವು ಅವರ ಮೇಲೆ ನಡೆದ ಸಿಪಿಎಂ ಪ್ರೇರಿತ ಹಲ್ಲೆಯನ್ನು ಪ್ರತಿಭಟಿಸಿ ಹಾಗೂ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಸೀತಾಂಗೋಳಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಗು‌ ಪೊನ್ನಂಗಳದಲ್ಲಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಸುಲೈಮಾನ್ ರನ್ನು ಕಾರಿನಲ್ಲಿ ಆಗಮಿಸಿದ ತಂಡ ಹಲ್ಲೆಗೈದಿತ್ತು. ಪ್ರತಿಭಟನಾ ಸಭೆಯನ್ನು ಕಾಂಗ್ರೆಸ್ ‌ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್.ಉದ್ಘಾಟಿಸಿದರು. ಕುಂಬಳೆ ಬ್ಲಾಕ್ ಅಧ್ಯಕ್ಷ ಸುಂದರ ಆರಿಕ್ಲಾಡಿ ಅಧ್ಯಕ್ಷತೆ ವಹಿಸಿದರು. ನಾಸರ್‌ ಮೊಗ್ರಾಲು,  ಲಕ್ಷ್ಮಣ ಪ್ರಭು, ಶ್ರೀನಾಥ್ ಬದಿಯಡ್ಕ, ಸತ್ಯನ್ ಉಪ್ಪಳ, ಕಮರುದ್ದೀನ್ ಪಾಡಲಡ್ಕ, ಶುಕೂರ್ ಕಾಣಾಜೆ,  ಜುನೈದ್ ಉರುಮಿ, ಬಿ.ಎಸ್.ಗಾಂಭೀರ್, ವಸಂತ, ಕೇಶವ, ರವಿರಾಜ್, ಸಲೀಂ ಪುತ್ತಿಗೆ, ಕುಞಹಮ್ಮದ್, ಶಾಜಿ, ಹನೀಫ್ ಲ, ರಾಸು, ಗಣೇಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments