ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿ ತಹಾವೂರ್ ರಾಣಾ ಕೇರಳ ಬೇಟಿ ನೀಡಿದ ಬಗ್ಗೆ ತನಿಖೆ ತೀವ್ರಗೊಂಡಿದೆ. ಇದಕ್ಕಾಗಿ ಕೇರಳದ ಕೊಚ್ಚಿ ಯುನಿಟ್ ನ ಎನ್.ಐ.ಎ.ಅಧಿಕಾರಿಗಳನ್ನು ನವದೆಹಲಿಗೆ ಕರೆಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಹಾವೂರ್ ರಾಣಾನ ವಿಚಾರಣೆ ವೇಳೆ ಎನ್.ಐ.ಎ.ಕೇರಳ ಅಧಿಕಾರಿಗಳು ಸಹ ಜತೆಗಿರುವರು.
2008 ನವಂಬರ್ 26 ರಂದು ಮುಂಬೈಯಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ದಾಳಿ ನಡೆದಿತ್ತು. ಅದಕ್ಕೂ ಮೊದಲು ನವಂಬರ್ 11 ರಿಂದ 21 ರ ವರೆಗೆ ತಹಾವೂರ್ ರಾಣಾ ಭಾರತದ ವಿವಿದ ಕಡೆಗಳಿಗೆ ಬೇಟಿ ನೀಡಿದ್ದರು. ಈ ವೇಳೆ ಈತ ಕೊಚ್ಚಿಗೂ ಆಗಮಿಸಿದ್ದನು. ಕೊಚ್ಚಿ ಅಲ್ಲದೆ ಕೇರಳದ ಇನ್ನೆಲ್ಲಿಗಾದರೂ ಈತ ಹೋಗಿದ್ದನೇ, ಈ ವೇಳೆ ಯಾರನ್ನೆಲ್ಲ ಬೇಟಿಯಾಗಿದ್ದಾನೆ ಎಂಬೀ ವಿಷಯಗಳ ಕುರಿತು ತಹಾವೂರ್ ರಾಣಾನ ವಿಚಾರಣೆ ವೇಳೆ ತಿಳಿಯಬೇಕಾಗಿದೆ. ಅದಕ್ಕಾಗಿ ಎನ್.ಐ.ಎ.ಕೇರಳ ಅಧಿಕಾರಿಗಳನ್ನು ನವದೆಹಲಿಗೆ ಕರೆಸಿಕೊಳ್ಳಲಾಗಿದೆ. ತಹಾವೂರ್ ರಾಣಾ ಕೇರಳದಲ್ಲಿ ಬೇಟೆಯಾದ ವ್ಯಕ್ತಿಗಳ ಕುರಿತು ಮಾಹಿತಿ ಬಹಿರಂಗಗೊಂಡರೆ ಅದು ಭಾರೀ ಕೋಲಾಹಲಕ್ಕೆ ಕಾರಣವಾಗಲಿದೆ
0 Comments