Ticker

6/recent/ticker-posts

ಉದ್ಯೋಗ ಅರಸಿ ಮನೆಯಿಂದ ಹೊರಟ ಟೈಲರ್ ನಾಪತ್ತೆ, ಪೊಲೀಸರಿಗೆ ದೂರು


 ಬದಿಯಡ್ಕ: ಉದ್ಯೋಗ ಅರಸಿ ಮನೆಯಿಂದ ಹೊರಟ ಟೈಲರ್ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಬದಿಯಡ್ಕ ಬಳಿಯ ಬಾಂಜತ್ತಡ್ಕ ನಿವಾಸಿ (ತಲಶೇರಿ ಪಾನೂರು ಮೂಲ ನಿವಾಸಿ) ಸುರೇಂದ್ರನ್ (60) ನಾಪತ್ತೆಯಾದ ವ್ಯಕ್ತಿ. ಇವರು ಬಾಂಜತ್ತಡ್ಕದ ಮನೆಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದರು. 2024  ಅಕ್ಡೋಬರ್ 13 ರಂದು ಬೆಳಗ್ಗೆ 9 ಗಂಟೆಗೆ ಇವರು ಮನೆಯಿಂದ ಉದ್ಯೋಗ ಅರಸಿ ಹೋದವರು ಹಿಂತಿರುಗಿಲ್ಲ.  ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಇವರ ಫೋನ್ ಮನೆಯಲ್ಲಿಯೇ ಬಿಟ್ಟು ಹೋದ ಕಾರಣ ಸಂಪರ್ಕ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಪತ್ನಿ ಪುಷ್ಪಾವತಿ ಬದಿಯಡ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ವರ್ಷಗಳ ಹಿಂದೆ ಸುರೇಂದ್ರನ್ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು ಎಂದು  ಮನೆಯವರು ತಿಳಿಸಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

Post a Comment

0 Comments