ಉಪ್ಪಳ : ದೈವ ದೇವರುಗಳ ಜೀರ್ಣೋದ್ಧಾರ ಕಾರ್ಯ ನಡೆದರೆ ಊರಿಗೆ ಕೀರ್ತಿ, ಗೆಲುವು ಪ್ರಾಪ್ತಿ. ಒಟ್ಟು ಗೂಡಿ ಕಾರ್ಯನಿರ್ವಹಿಸಿದರೆ ಗೆಲುವು ಸಾಧ್ಯ. ದೇಶದ ಸಂಸ್ಕಾರ ಸಂಸ್ಕೃತಿಗೆ ಕುಟುಂಬವೇ ತಾಯಿ ಬೇರು ಎಂದು ಅಡ್ಕ ಶ್ರೀ ಚಕ್ರಪದಿ ಬೀರಮಾರ್ಲರ ಮಾಡದ ದೈವಗಳ ಹಾಗೂ ನಾಗದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪ.ಪೂ ಶ್ರೀ ಗುರುದೇವಾನಂದ ಸ್ವಾಮೀಜಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬೀರಮಾರ್ಲರ ಮಾಡ ಟ್ರಸ್ಟ್ ಅಧ್ಯಕ್ಷ ಮಲರಾಮ ಜಯರಾಮ ರೈ ವಹಿಸಿದ್ದರು. ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ತಂತ್ರಿವರ್ಯರಾದ ಬಡಾಜೆ ಬೂಡು ಗೋಪಾಲಕೃಷ್ಣ ಭಟ್, ಕುಳೂರು ಕನ್ಯಾನ ಡಾ.ಸದಾಶಿವ ಕೆ ಶೆಟ್ಟಿ, ಅಡ್ಕ ಬೀರಮಾರ್ಲರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಧ್ಯಕ್ಷ ಬರೋಡ ಶಶಿಧರ ಬಿ ಶೆಟ್ಟಿ, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ, ಶ್ರೀಧರ ಭಟ್ ಉಪ್ಪಳ, ಸೀರೆ ಶಂಕರನಾರಾಯಣ ದೇವಸ್ಥಾನದ ಪ್ರಶಾಂತ್ ಶಿರಿಯ,ಉದ್ಯಾವರ ರಾಜ ಬೆಳ್ಚಪ್ಪಾಡ, ಮುಂಡಪಳ್ಳ ಕೆ.ಕೆ ಶೆಟ್ಟಿ, ಒಡಿಯುರು ಸೇವಾ ಬಳಗ ಪುಣೆ ಪ್ರಭಾಕರ ಶೆಟ್ಟಿ ವಾನಂದೆ, ಡಾ. ವಿಜಯಪಂಡಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಚಂದ್ರಪ್ರಭಾ ಹೆಗ್ಡೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಧರ್ಮಪ್ರಸಾದ್ ರೈ ಸ್ವಾಗತಿಸಿ ರವಿರಾಜ್ ಶೆಟ್ಟಿ ವಂದಿಸಿದರು.
ಬೆಳಿಗ್ಗೆ ವೃಷಭ ಲಗ್ನ ಸುಮುಹೂರ್ತದಲ್ಕಿ ಶ್ರೀ ಚಕ್ರಪದಿ ಬೀರಮಾರ್ಲರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಆಶ್ಲೇಷ ಬಲಿ ಪೂಜೆ,ನಾಗತಂಬಿಲ, ಪ್ರಸಾದ ವಿತರಣೆ ಜರಗಿತು. ಅನ್ನಸಂತರ್ಪಣೆ ಯ ಬಳಿಕ ಅಣ್ಣ ದೈವದ ನೇಮೋತ್ಸವ, ಸಂಜೆ ತಮ್ಮ ದೈವದ ನೇಮೋತ್ಸವ, ಪ್ರಸಾದ ವಿತರಣೆ ಜರಗಿತು.ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ತುಳುನಾಡ ವೈಭವ ಪ್ರದರ್ಶನಗೊಂಡಿತು.
0 Comments