ದುಬೈ : ಕರ್ನಾಟಕ ಸಂಘ ದುಬೈ ವತಿಯಿಂದ "ಮೇಘ ಡ್ಯಾನ್ಸ್ ಕಪ್ -2025" ನೃತ್ಯ ಸ್ಪರ್ಧೆ ಕಾರ್ಯಕ್ರಮ ಅದ್ದೂರಿಯಾಗಿ ಮೇ 25 ರಂದು ನಡೆಯಲಿದೆ ಎಂದು ಕರ್ನಾಟಕ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದರು.
ನಗರದ ಊದ್ ಮೆತದ ಅಲ್ ನಾಸರ್ ಲೆಸಾರ್ ಲ್ಯಾಂಡ್ ಐಸ್ ರಿಂಕ್ ಸಭಾಂಗಣದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 7 ರ ವರೆಗೆ ಯುಎಇಯ ವಿವಿಧ ನೃತ್ಯ ತಂಡಗಳಿಂದ ನೃತ್ಯ ಸ್ಪರ್ಧೆಗಳು ನಡೆಯಲಿದೆ.ಈ ನೃತ್ಯ ಸ್ಪರ್ಧೆಗಳು ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಜರಗಲಿದೆ.ನೃತ್ಯ ಸ್ಪರ್ಧೆಯೊಂದಿಗೆ ರಂಗೊಲಿ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಯು ಜರಗಲಿದೆ.ತುಳು ಕನ್ನಡ ಚಿತ್ರರಂಗದ ನಾಯಕ ನಟ ಪೃಥ್ವಿ ಅಂಬಾರ್ ಮತ್ತು ಕರ್ನಾಟಕದ ಪ್ರಖ್ಯಾತ ತೀರ್ಪುಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸುತ್ತಾ ಯುಎಇಯಲ್ಲಿ ಇರುವ ತುಳು ಕನ್ನಡಿಗರು ಈ ಕಾರ್ಯಕ್ರಮಸಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಸಂಘ ದುಬೈ ಎಲ್ಲಾ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments