Ticker

6/recent/ticker-posts

Ad Code

ಯುವಕನ ಮೃತದೇಹ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಬೆಳ್ಳೂರು: ಯುವಕನ ಮೃತದೇಹ ಖಾಸಗಿ ವ್ಯಕ್ತಿಯ ರಬ್ಬರ್ ತೋಟದಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೆಟ್ಟಣಿಗೆ ನಾಕೂರು ನಿವಾಸಿ ದಿವಂಗತ ಜಯದಾಮರ ಪುತ್ರ ಚಂದ್ರಶೇಖರ (27) ಮೃತಪಟ್ಟ ವ್ಯಕ್ತಿ. ನಿನ್ನೆ (ಮಂಗಳವಾರ) ಮದ್ಯಾಹ್ನ ಇವರ ಮೃತದೇಹ ಮನೆಯಿಂದ ಅರ್ದ ಕಿ.ಮೀಟರ್ ದೂರದಲ್ಲಿ ರಬ್ಬರ್‌ ಮರದಲ್ಲಿ  ಪತ್ತೆಯಾಗಿದೆ. ಮಾಹಿತಿ ತಿಳಿದು ಆಗಮಿಸಿದ ಆದೂರು ಪೊಲೀಸರು ಕೇಸು ದಾಖಲಿಸಿದ್ದು ತನಿಖೆ ನಡೆಸಿದ್ದಾರೆ. ಚಂದ್ರಶೇಖರ ಅವರು ಅಡಿಕೆ ಸುಲಿಯುವ ಕಾರ್ಮಿಕರಾಗಿದ್ದಾರೆ.‌ ಮೃತರು  ತಾಯಿ ರಾಜೀವಿ, ಸಹೋದರ ಸೂರಜ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Post a Comment

0 Comments