ಮಾರ್ಪನಡ್ಕ:- ಶ್ರೀ ಮಾತಾ ನೃತ್ಯ ಭಜನಾ ಸಂಘ ಜಯನಗರ ಮಾರ್ಪನಡ್ಕ, ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಕಾಸರಗೋಡು ಇವರ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಜಯನಗರ ಪದ್ಮಶ್ರೀ ಹಾಲ್ ನಲ್ಲಿ ಜರಗಿತು.
ಶ್ರೀ ಮಾತಾ ನೃತ್ಯ ಭಜನಾ ಸಂಘದ ಅಧ್ಯಕ್ಷೆ ಸುಪ್ರಿತ ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ! ಸಾಗರ್ ಅವರು ದೀಪ ಬೆಳಗಿಸಿ ನೆರವೇರಿಸಿದರು. ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್ ಮಂಜೇಶ್ವರ್ ಮುಖ್ಯ ಅತಥಿಯಾಗಿ ಭಾಗವಹಿಸಿದರು. ,ಸಂಘದ ಸದಸ್ಯರಾದ ಸುರೇಶ್ ಬಿಕೆ, , ಹರಿಪ್ರಸಾದ್ , ಶುಭಲಕ್ಷ್ಮಿ, ಪ್ರಿಯ, ಶಕೀಲ, ಪೂರ್ಣಿಮ ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ರವಿಕಲ ಸ್ವಾಗತಿಸಿ, ಕೃಷ್ಣ ನಾಯಕ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನೂರಾರು ಜನ ಈ ಶಿಬಿರದ ಸದುಪಯೋಗ ಪಡೆದುಕೊಂಡರು.
0 Comments