Ticker

6/recent/ticker-posts

Ad Code

ಕಣ್ಣೂರಿನಲ್ಲಿ ಬೈಕಿನಲ್ಲಿ ಬಂದ ತಂಡದಿಂದ ಯುವಕನ ಇರಿದು ಹತ್ಯೆ, ತಡೆಯಲೆತ್ನಿಸಿದ ಪತ್ನಿಗೂ ಗಂಭೀರ ಗಾಯ


 ಕಣ್ಣೂರು: ಇಲ್ಲಿನ ಇರಿಟ್ಟಿ ಪಯ್ಯಾವೂರಿನಲ್ಲಿ  ಮನೆಗೆ  ಅತಿಕ್ರಮಿಸಿ ಯುವಕನನ್ನು ಇರಿದು ಕೊಲೆಗೈದ ಘಟನೆ ನಡೆದಿದೆ. ತಡೆಯಲು ಯತ್ನಿಸಿದ ಪತ್ನಿಗೂ ಗಂಭೀರ ಗಾಯಗಳಾಗಿವೆ. ಪಯ್ಯಾವೂರು ಕಾಞಿಕೊಲ್ಲಿ ನಿವಾಸಿ ಸುಧೀಶ್ ಬಾಬು(31) ಕೊಲೆಗೀಡಾದ ವ್ಯಕ್ತಿ.  ಈತನ ಪತ್ನಿ ಶ್ರುತಿ(28) ಯನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಮಂಗಳವಾರ) ಮದ್ಯಾಹ್ನ 12.30 ಕ್ಕೆ ಈ ಘಟನೆ ‌ನಡೆದಿದೆ. ಬೈಕಿನಲ್ಲಿ ಆಗಮಿಸಿದ ಇಬ್ಬರ ತಂಡ ಕೊಲೆ ನಡೆಸಿದೆ. ಹಣಕಾಸು ಸಂಬಂಧ ವಿಷಯವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.

Post a Comment

0 Comments