ದುಬೈ: ಪಹಲ್ಗಾಂ ಭಯೋತ್ಪಾದಕ ದಾಳಿ ಹಾಗೂ ಆಪರೇಶನ್ ಸಿಂಧೂರ್ ವಿರುದ್ದ ಪ್ರತ್ಯಕ್ಷ ದ್ವನಿ ಎತ್ತಿ ಭಾರತವನ್ನು ಅವಮಾನಿಸಿದ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರೀದಿಗೆ ದುಬೈ ಮಲಯಾಳಿ ಸಮಾಜ ಅದ್ದೂರಿಯ ಸ್ವಾಗತ ನೀಡಿರುವುದು ವಿವಾದಕ್ಕೆ ತಿರುಗಿದೆ. ದುಬೈಯಲ್ಲಿ ಈ ತಿಂಗಳ 25 ರಂದು ನಡೆದ ಮಲಯಾಳಿ ಸಮಾಜದ ಕಾರ್ಯಕ್ರಮದಲ್ಲಿ ಅಫ್ರೀದಿ ಮುಖ್ಯ ಅತಿಥಿಯಾಗಿದ್ದರು.
ಅವರನ್ನು ವೇದಿಕೆಯ ಕೆಳಗಿನಿಂದಲೇ ಬರಮಾಡಿಕೊಳ್ಳುವ, ಅದ್ದೂರಿಯ ಸ್ವಾಗತ ನೀಡುವ ಚಿತ್ತಗಳು ಇದೀಗ ವೈರಲ್ ಆಗುತ್ತಿದೆ. ಕೊಚ್ಚಿನ ಯುನಿವರ್ಸಿಟಿ ಬಿ-ಟೆಕ್ ಅಲಂನಿ ಅಸೋಸಿಯೇಷನ್ ಆಶ್ರಯದಲ್ಲಿ ಈ ಸ್ವಾಗತ ಕಾರ್ಯಕ್ರಮ ದುಬೈಯಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಪಾಸ್ ಪೋರ್ಟ್ ರದ್ದುಗೊಳಿಸಬೇಕು ಎಬಿವಿಪಿ ರಾಜ್ಯ ಘಟಕ ಒತ್ತಾಯಿಸಿದೆ. ಪಹಲ್ಗಾಂ ದಾಳಿಯನ್ನು ಭಾರತವೇ ನಡೆಸಿತ್ತು ಎಂದು ಅಫ್ರೀದಿ ಟೀಕಿಸಿದ್ದರು. ಅಲ್ಲದೆ ಭಾರತದ ದಾಳಿಯ ನಂತರ ಪಾಕಿಸ್ಥಾನದಲ್ಲ ನಡೆದ ವಿಜಯೋತ್ಸವದಲ್ಲಿ ಅಫ್ರೀದಿ ನೇತೃತ್ವ ವಹಿಸಿದ್ದರು. ಭಾರತದ ಸೇನೆಯ ವಿರುದ್ದ ಕಟು ಟೀಕೆ ಒಳಗೊಂಡಿರುವ ಶಹೀದ್ ಅಫ್ರೀದಿಯ ಯುಟ್ಯೂಬ್ ಚಾನಲ್ ಭಾರತದಲ್ಲಿ ನಿಷೇದಿಸಲಾಗಿತ್ತು.

0 Comments