Ticker

6/recent/ticker-posts

Ad Code

ಕೊಳದಲ್ಲಿ ಸ್ನಾನಕ್ಕಿಳಿದ ಇಬ್ಬರು ಮಕ್ಕಳು‌ ನೀರಿನಲ್ಲಿ ಮುಳುಗಿ ಮೃತ್ಯು, ಓರ್ವನ ಸ್ಥಿತಿ ಚಿಂತಾಜನಕ


 ಕಾಞಂಗಾಡ್: ಇಲ್ಲಿನ ಮಾಣಿಕೋತ್ ಪಾಲಕ್ಕಿ ಎಂಬಲ್ಲಿ ಸ್ನಾನಕ್ಕೆಂದು ಕೊಳಕ್ಕಿಳಿದ ಇಬ್ಬರು ಮಕ್ಕಳು‌ ಮೃತಪಟ್ಟ ದಾರುಣ ಘಟನೆ ನಡೆದಿದೆ. ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಅಫಾಸ್(9) , ಅನ್ವರ್(11) ಮೃತಪಟ್ಟ ಬಾಲಕರು. ಮೃತಪಟ್ಟ ಅನ್ವರ್ ನ ತಮ್ಮ ಹಾಶಿರ್(9) ನನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಗುರುವಾರ ಸಾಯಂಕಾಲ ನಾಲ್ಕೂವರೆ ಗಂಟೆಗೆ ಈ ದಾರುಣ ಘಟನೆ ನಡೆದಿದೆ. ಸ್ನಾನಕ್ಕಿಳಿದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿದ್ದು ಮಾಹಿತಿ ತಿಳಿದ ಊರವರು ಹಾಗೂ ಅಗ್ನಿಶಾಮಕ ದಳ ಸಿಬಂದಿಗಳು ಮೂರು ಮಂದಿಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರು. ಈ ವೇಳೆ ಇಬ್ಬರು ಮೃತಪಟ್ಟಿದ್ದರು.

Post a Comment

0 Comments