Ticker

6/recent/ticker-posts

Ad Code

ಪಡುಕುತ್ಯಾರಿನಲ್ಲಿ ಆನೆಗುಂದಿಶ್ರೀಗಳವರ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂಪನ್ನ

 


ಉಡುಪಿ : ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಗಳವರ 15ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವವು  ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ಸಂಪನ್ನಗೊಂಡಿತು.

ಮೇ 22 ರಂದು  ವರ್ಧಂತಿ ಉತ್ಸವದ ಅಂಗವಾಗಿ ಸಾಮೂಹಿಕ ಚಂಡಿಕಾಯಾಗ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪ ಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಪ್ರಧಾನ, ಯುವಶಿಲ್ಪಿಗಳಿಗೆ ಅಭಿನಂದನೆ ನಡೆಯಿತು.


ಅಂದು  ಬೆಳಿಗ್ಗೆ  ಜಗದ್ಗುರುಗಳವರಿಂದ ಕಟಪಾಡಿ ಶ್ರೀಮಹಾಸಂಸ್ಥಾನದಲ್ಲಿ  ಪಟ್ಟಾಭಿಷೇಕ  ವರ್ಧಂತಿಯ ಸಂಬದಿತ  ವಿವಿಧ ವೈದಿಕ ವಿಧಿ ವಿಧಾನಗಳ ನಡೆಯಿತು.

ಶ್ರೀಕರಾರ್ಚಿತ ದೇವತಾ ಪೂಜೆ ಬಳಿಕ  ಕಟಪಾಡಿಯಲ್ಲಿರುವ ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ  ವೃಂದಾವನದಲ್ಲಿ ಜಗದ್ಗುರುಗಳವರಿಂದ ಪೂಜೆ ನಡೆಯಿತು.

ಬಳಿಕ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ   ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ  ಪೂರ್ಣಾಹುತಿ ನಡೆಯಿತು. ನಂತರ  ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆಯ ಬಳಿಕ  ಮಹಾಸಂಸ್ಥಾನದ  ಪ್ರಥಮ ವಿಶ್ವಸ್ಥರಾಗಿರುವ ದೇವಸ್ಥಾನಗಳ ಧರ್ಮದರ್ಶಿಗಳವರಿಂದ,  ವಾಡಿಕೆಯಂತೆ ಆಯಾ ದೇವಸ್ಥಾನಗಳ ವತಿಯಿಂದ  ಜಗದ್ಗುರುಗಳವರಿಗೆ  ಫಲನ್ಯಾಸ,  ದೇವಸ್ಥಾನಗಳಲ್ಲಿ ವಾರ್ಷಿಕ ಸಂಗ್ರಹಿತ ಗುರುಕಾಣಿಕೆ ಸಮರ್ಪಣೆ ಪಟ್ಟಾಭಿಷೇಕ  ವರ್ಧಂತಿಯ ವಿಧಿ ವಿಧಾನಗಳು ನಡೆಯಿತು.

ಮೋರ್ಸಿಂಗ್‌ ಸಾಮ್ರಾಟ್‌ ವಿದ್ವಾನ್‌ ಎಲ್‌ ಭೀಮಾಚಾರ್‌ ಮಕ್ಕಳಾದ ವಿದ್ವಾನ್‌  ರಾಜಶೇಖರ ಎಲ್‌ ಭೀಮಾಚಾರ್‌ ಬೆಂಗಳೂರು   ವಿದುಷಿ ಭಾಗ್ಯಲಕ್ಷ್ಮೀ ಕೃಷ್ಣ ತಂಡದವರಿಂದ ಮೋರ್ಸಿಂಗ್‌ ತರಂಗಲಯ ಕಾರ್ಯಕ್ರಮ ನಡೆಯಿತು.


Post a Comment

0 Comments