ಪೆರ್ಲ▪️ 2024-25 ನೆಯ ಸಾಲಿನ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ರೀರಂಜಿನಿ ಎಸ್ 1200 ರಲ್ಲಿ 1200 ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ.ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 59 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.ಶಾಲೆಯ 14 ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯದಲ್ಲಿ ಎ- ಪ್ಲಸ್ ಅಂಕ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಶ್ರೀರಂಜಿನಿ, ಪ್ರಜ್ಞಾ.ಕೆ, ಸ್ಕಂದಾ ಶರ್ಮ ಜೆ.ಕೆ, ನಭಿಸತುಲ್ ಶಿಜಾನ, ಅನುರಾಗ್, ರಕ್ಷಿತಾ.ಬಿ,ಮರಿಯಮತ್ ಶಾಹಾನ ಹಾಗೂ ಶಿವಾನಿ.ಕೆ . ಹ್ಯುಮಾನಿಟೀಸ್ ವಿಭಾಗದಲ್ಲಿ ಸುಖಿ.ಬಿ,ಸಂಕೇತ್.ಎಸ್,ಸ್ವರ್ಣ ಲಕ್ಷ್ಮಿ ಜಿ ಶೆಟ್ಟಿ,ಕಾವ್ಯಶ್ರೀ,ಆಯಿಶತ್ ನಿಹಾ,ಆಶಾ ಎಂಬೀ ವಿದ್ಯಾರ್ಥಿಗಳು ಎಲ್ಲಾ ಆರು ವಿಷಯಗಳಲ್ಲೂ ಎ ಪ್ಲಸ್ ಅಂಕ ಹಾಗೂ 10 ವಿದ್ಯಾರ್ಥಿಗಳು 5 ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುತ್ತಾರೆ.
ಶಾಲೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಸಂಜೀವ ರೈ, ಮೆನೇಜರ್ ಮಿತ್ತೂರ್ ಪುರುಷೋತ್ತಮ ಭಟ್, ಆಡಳಿತ ಮಂಡಳಿ ಸದಸ್ಯರು,ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ,ಶಿಕ್ಷಕ ವೃಂದ ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
0 Comments