Ticker

6/recent/ticker-posts

Ad Code

ಭಾರತೀಯ ಸೇನೆಯನ್ನು ಅವಮಾನಿಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದಾತನ ಸೆರೆ


 ಭಾರತೀಯ ಸೇನೆಯ ಹಾಗೂ ಸೈನಿಕರ ವಿರುದ್ದ ಸಾಮಾಜಿಕ ಜಾಲ ತಾಣದಲ್ಲಿ ರಾಷ್ಟ್ರ ದ್ರೋಹದ ರೀತಿಯ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಲಪ್ಪುರಂ ಏರನಾಡ್ ಕಾರಾಕುನ್ ನಿವಾಸಿ ಮುಹಮ್ಮದ್ ನಸೀಂ(26) ಬಂಧಿತ ಆರೋಪಿ. ಇನ್ಸ್ಟಾಗ್ರಾಂ ಮೂಲಕ ಭಾರತೀಯ ಸೇನೆಯನ್ನು ಅವಮಾನಿಸಿ ಪೋಸ್ಟ್ ಹಾಕಿದ ಈತನನ್ನು ಇಡುಕ್ಕಿ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಪಹಲ್ಗಾಂ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ವಿಡಿಯೋದ ಕೆಳಗೆ ಈತ ಸೇನೆಯನ್ನು ತೆಗಳಿ ಕಮೆಂಟು ಹಾಕಿದ್ದನು. ಇಡುಕ್ಕಿ ನಿವಾಸಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದರು.

Post a Comment

0 Comments