Ticker

6/recent/ticker-posts

Ad Code

ದುಬೈಯಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಗುರುವಂದನ ಕಾರ್ಯಕ್ರಮ


ದುಬೈ : ವೀರಶೈವ ಲಿಂಗಾಯತ ಸಮಾಜ ದುಬೈ- ಯುಎಇ ಇವರ ವತಿಯಿಂದ ಗುರುವಂದನ ಕಾರ್ಯಕ್ರಮ ಇತ್ತೀಚೆಗೆ ದುಬೈಯ ಫಾರ್ಚೂನ್ ಏಟ್ರಿಯಮ್ ನ‌ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿತು.

      ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಫಾರ್ಚೂನ್ ಗ್ರೂಪ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ,ಪರ್ವ ಗ್ರೂಪ್ ಆಫ್ ಸಂಸ್ಥೆಗಳ ಅಧ್ಯಕ್ಷರಾದ ನೀಲೇಶ್ ಹೆಚ್.ಪಿ, ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷರಾದ ಶಶಿಧರ್ ನಾಗರಾಜಪ್ಪರವರು ಅತಿಥಿಗಳಾಗಿ ಉಪಸ್ಥಿತರಿದ್ದರು.

       


ದೀಪ ಬೆಳಗಿಸುವ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ  ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಯವರನ್ನು ಗೌರವಿಸಲಾಯಿತು.ನಂತರ ಶ್ರೀಗಳು ಆಶಿರ್ವಚನ ನೀಡುವ ಮೂಲಕ ಎಲ್ಲರನ್ನೂ ಆಶಿರ್ವದಿಸಿದರು.

      ಕಾರ್ಯಕ್ರಮದಲ್ಲಿ ಯುಎಇಯ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದರು.ಯುಎಇ ಬಂಟ್ಸ್ ನ ಜಯಂತ್ ಶೆಟ್ಟಿ,ಟಿ.ಕೆ ಕನ್ಸ್ಟ್ರಕ್ಷನ್ ನ ಪ್ರವೀಣ್ ಅಮರನಾಥ್, ಮುರುಗೇಶ್ ಗಾಜರೆ ಬೆಂಗಳೂರು,ಮೊಸಾಕೊ ಶಿಪ್ಪಿಂಗ್ ನ ಫ್ರಾಂಕ್ ಫೆರ್ನಾಂಡಿಸ್, ಕರ್ನಾಟಕ ಸಂಘ ದುಬೈಯ ಮನೋಹರ ಹೆಗ್ಡೆ, ಕರ್ನಾಟಕ ಸಂಘ ಶಾರ್ಜಾದ ಸತೀಶ್ ಪೂಜಾರಿ,ಬಸವ ಸಮಿತಿ ದುಬೈಯ ವೀರೇಶ್ ಪಾಟಿಲ್, ಚಂದ್ರಶೇಖರ ಲಿಂಗದಹಳ್ಳಿ,ಮೊಗವಿರ್ಸ್ ದುಬೈಯ ಬಾಲಕೃಷ್ಣ ಸಾಲಿಯಾನ್,ಬಿಲ್ಲವ ಸಮಾಜದ ದೀಪಕ್ ಎಸ್.ಪಿ,ಮಾರ್ಗದೀಪ ಸಂಘದ ಸುಂದರರಾಜ್ ಬೇಕಲ್, ಜೈನ್ ಮಿಲನ್ ನ ಸಂದೇಶ್ ಜೈನ್,ಐಪಿಎಫ್ ಕರ್ನಾಟಕದ ನಾಗರಾಜ ರಾವ್ ಉಡುಪಿ, ಕನ್ನಡ ಪಾಠ ಶಾಲೆಯ ಸುನೀಲ್ ಗವಾಸ್ಕರ್, ಗಲ್ಫ್ ಗೆಳೆಯರ ಗೆಳತಿಯರು ಬಳಗದ ಸಾಗರ್ ಶೆಟ್ಟರ್, ಶ್ರೀಮತಿ ಮೇಘಾ ಶೆಟ್ಟರ್, ಚಂದ್ರಶೇಖರ ಸಂಕೋಲೆ ಮತ್ತು ಇನ್ನಿತರು ಉಪಸ್ಥಿತರಿದ್ದರು.

   



  ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀಗಳನ್ನು ಮತ್ತು ಗಣ್ಯರನ್ನು ಪರಿಚಯಿಸಿದರು.ಉಪಾಧ್ಯಕರಾದ  ಶಶಿಧರ್ ನಾಗರಾಜಪ್ಪರವರು ಸ್ವಾಗತಿಸಿ ಜೊತೆ ಕಾರ್ಯದರ್ಶಿ ಸಿದ್ದಲಿಂಗೇಶ್ ವಂದಿಸಿದರು.

ವರದಿ :  ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Post a Comment

0 Comments