Ticker

6/recent/ticker-posts

Ad Code

ಆಶಾ ಕಾರ್ಯಕರ್ತೆಯರಿಗೆ ಪಂ.ನಿಂದ 2ಸಾವಿರ ರೂ ಗೌರವ ಧನ ಹೆಚ್ಚಿಸಿದ ತೀರ್ಮಾನಕ್ಕೆ ಡಿಪಿಸಿ ತಡೆ - ಮೇಲ್ಮನವಿಗೆ ನಿರ್ಧಾರ : ಸೋಮಶೇಖರ್ ಜೆ.ಎಸ್.


ಪೆರ್ಲ : ಆರೋಗ್ಯ ರಂಗದಲ್ಲಿ ಸಾಮಾಜಿಕ ಸ್ಚಾಸ್ಥ ಸಂಕಲ್ಪಕ್ಕೆ ಅಲ್ಪ ಗೌರವಧನಕ್ಕಾಗಿ ಅಹರ್ನಿಸಿ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ರೂ 2000 ಗೌರವ ಧನ ಹೆಚ್ಚಿಸುವಂತೆ ಎಣ್ಮಕಜೆ ಗ್ರಾ.ಪಂ. ಆಡಳಿತ ಸಮಿತಿ ತೀರ್ಮಾನ ಕೈಗೊಂಡು ಕಾಸರಗೋಡು ಜಿಲ್ಲಾ ಯೋಜನ ಸಮಿತಿಯ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಇದೀಗ ಜಿಲ್ಲಾ ಯೋಜನಾ ಸಮಿತಿಯು ಅಂಗೀಕಾರವನ್ನು ತಿರಸ್ಕರಿಸಿದೆ. ಎಣ್ಮಕಜೆಯಲ್ಲಿ 21 ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದು ಇವರಿಗೆ ಹೆಚ್ಚುವರಿಯಾಗಿ 2000ಯಂತೆ  ವೇತನ ವಿತರಿಸಲು 10 ತಿಂಗಳ ಕಾಲಕ್ಕೆ 4.20 ಲಕ್ಷ ರೂ ಗಳ ಯೋಜನೆ ಇರಿಸಿ ಅಂಗೀಕಾರಕ್ಕಾಗಿ ಡಿಪಿಸಿಗೆ ಕಳುಹಿಸಿ ಕೊಡಲಾಗಿತ್ತು.ಇದನ್ನು ಜಿಲ್ಲಾ ಯೋಜನ‌ ಸಮಿತಿ ತಿರಸ್ಕರಿಸಿದ್ದು ಈ ಬಗ್ಗೆ ರಾಜ್ಯ ಕೋರ್ಡಿನೇಶನ್ ಸಮಿತಿಗೆ ಮೇಲ್ಮನವಿ ಸಲ್ಲಿಸುವುದಾಗಿ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ತಿಳಿಸಿದ್ದಾರೆ.

Post a Comment

0 Comments