Ticker

6/recent/ticker-posts

Ad Code

ನೀರ್ಚಾಲಲ್ಲಿ ಕಾಸರಗೋಡು ಜಿಲ್ಲಾ ಯೋಗ ಉತ್ಸವ ೨೦೨೫


ಕುಂಬಳೆ: ಕೇಂದ್ರ ಸರ್ಕಾರದ ಯುವಜನ ಕ್ಷೇಮ ಮತ್ತು ಕ್ರೀಡಾ ಮಂತ್ರಾಲಯದ ಅಂಗೀಕಾರ ಇರುವ 'ಯೋಗಾಸನ ಭಾರತ ಇದರ ಕೇರಳ ರಾಜ್ಯ ಘಟಕವಾದ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇ಼ನ್ ಆಫ್ ಕೇರಳದ ಜಿಲ್ಲಾ ಘಟಕವಾದ 'ಯೋಗಾಸನ ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಯೋಗ ಉತ್ಸವ ೨೦೨೫ ಎಂಬ ವಿನೂತನ ಕಾರ್ಯಕ್ರಮವನ್ನು ಮೇ24 ಮತ್ತು 25 ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಆವರಣದಲ್ಲಿ ವ್ಯೆವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಮೇ.24 ರಂದು ಸಂಜೆ 4ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು.ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಪ್ಯೆಲೂರು ಉದ್ಘಾಟಿಸುವರು. ತಲಪಾಡಿ ಶ್ರೀಶಾರದಾ ವ್ಯೆದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್. ಆರ್., ಉದ್ಯಮಿ ನಿತ್ಯಾನಂದ ಶೆಣ್ಯೆ ಬದಿಯಡ್ಕ ಮುಖ್ಯ ಅತಿಥಿಗಳಾಗಿರುವರು. ಗ್ರಾ.ಪಂ.ಉಪಾಧ್ಯಕ್ಷ ಎಂ.ಅಬ್ಬಾಸ್, ಬ್ಲಾ.ಪಂ.ಸದಸ್ಯರಾದ  ಸುಕುಮಾರ ಕುದ್ರೆಪ್ಪಾಡಿ,        ಜಯಂತಿ, ಗ್ರಾ.ಪಂ.ಸದಸ್ಯೆ ಜಯಶ್ರೀ.ಪಿ. ಶುಭಹಾರೈಯಿಸುವರು. ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ್, ಯೋಗಾಸನ ಕೇರಳ ರಾಜ್ಯ ಕಾರ್ಯದರ್ಶಿ ಶಾಮಿಲ್ ಮೋನ್ ಉಪಸ್ಥಿತರಿರುವರು.

ಮೇ.25 ರಂದು ಸಂಜೆ 4 ಕ್ಕೆ ಜರಗುವ ಸಮಾರೋಪ ಸಮಾರಂಭವನ್ನು ಮೇಕ್ಸಿಕೊದ ಯೋಗ ರಾಯಭಾರಿ ಯೋಗಾಚಾರ್ಯ ವಿಜಯ ಗಣೇಶ್ ಬದಿಯಡ್ಕ ಉದ್ಘಾಟಿಸುವರು. ಯೋಗಾಸನ ಕಾಸರಗೋಡು ಜಿಲ್ಲಾಧ್ಯಕ್ಷ ರವಿಶಂಕರ ನೆಗಲಗುಳಿ ಅಧ್ಯಕ್ಷತೆ ವಹಿಸುವರು. ಬ್ಲಾ.ಪಂ.ಸದಸ್ಯೆ ಅಶ್ವಿನಿ ಎಂ.ಎಲ್., ಯೋಗಾಸನ ಕೇರಳದ ಕಾರ್ಯದರ್ಶಿ ಶಮಿಲ್ ಮೋನ್, ದೇಲಂಪಾಡಿ ಯೋಗ ಪ್ರತಿಷ್ಠಾಬದ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿರುವರು. ಬ್ಲಾ.ಪಂ.ಸದಸ್ಯೆ ಅಶ್ವಿನಿ ಮೊಳೆಯಾರ, ಗ್ರಾ.ಪಂ.ಸದಸ್ಯೆ ಸ್ವಪ್ನ ಕೆ.ಪಿ., ಉದ್ಯಮಿ ಹರಿಪ್ರಸಾದ್ ರ ಪುತ್ರಕಳ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಶಾಲಾ ಪ್ರಭಾರ ಪ್ರಾಂಶುಪಾಲೆ ಜಯಲಕ್ಷ್ಮಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ವ್ಯೆ ಉಪಸ್ಥಿತರಿರುವರು.

ಸುದ್ದಿಗೋಷ್ಠಿಯಲ್ಲಿ ಯೋಗಾಸನ ಕಾಸರಗೋಡು ಅಧ್ಯಕ್ಷ ರವಿಶಂಕರ ನೆಗಲಗುಳಿ, ಕಾರ್ಯದರ್ಶಿ ತೇಜಕುಮಾರಿ ಕಾಸರಗೋಡು, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಗಣೇಶ್ ಭಟ್ ಪೆರ್ವ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಜಿಲ್ಲಾ ಸದಸ್ಯ ವಿನಯಪಾಲ್, ಪ್ರತಿಭಾ ಕಾಸರಗೋಡು, ಶಾಲಾ ಪಿಟಿಎ ಅಧ್ಯಕ್ಷ ಸುಕುಮಾರ ಕುದ್ರೆಪ್ಪಾಡಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.

Post a Comment

0 Comments