ಮಗಳನ್ನು ಮದುವೆ ಮಾಡಿ ಕೊಡಲು ಒಪ್ಪದ ತಂದೆಯನ್ನು ನೆರೆ ಮನೆಯ ಯುವಕ ಇರಿದು ಕೊಲೆಗೈದ ಘಟನೆ ನಡೆದಿದೆ. ತಿರುವನಂತಪುರಂ ಮಂಗಲಾಪುರಂ 16 ನೇ ಮೈಲು ನಿವಾಸಿ ಎ.ತಾಹ(67) ಕೊಲೆಗೀಡಾದವರು. ಇದಕ್ಕೆ ಸಂಬಂಧಪಟ್ಟಂತೆ ತಾಹ ಅವರ ಸಂಬಂಧಿಕ ರಾಶೀದ್(31) ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಬುದವಾರ) ಮದ್ಯಾಹ್ನ ಈ ಘಟನೆ ನಡೆದಿದೆ. ಕೊಲೆಗೀಡಾದ ತಾಹ ಹಾಗೂ ಪತ್ನಿ ಈ ತಿಂಗಳ 28 ರಂದು ಹಜ್ ಪ್ರವಾಸದ ಸಿದ್ದತೆಯಲ್ಲಿದ್ದರು ಎಂದೂ ತಿಳಿದು ಬಂದಿದೆ.
ನಿನ್ನೆ (ಬುದವಾರ) ಮದ್ಯಾಹ್ನ ಕತ್ತಿ ಹಿಡಿದು ಮನೆಗೆ ಬಂದ ಆರೋಪಿ ರಾಶೀದ್ ತಾಹ ಅವರಿಗೆ ಇರಿದನೆನ್ನಲಾಗಿದೆ. ಈ ವೇಳೆ ತಡೆಯಲು ಯತ್ನಿಸಿದ ಪತ್ನಿ ನೂರ್ ಜಹಾನ್ ರಿಗೂ ಗಾಯಗಳಾಗಿವೆ. ತಾಹ ಅವರ ಹೊಟ್ಟೆಗೆ ನಾಲ್ಕು ಆಳವಾದ ಗಾಯಗಳಾಗಿದ್ದು ಕರುಳು ಹೊರಬಂದಿತ್ತು. ಸ್ಥಳೀಯರು ಅವರನ್ನು ತಿರುವನಂತಪುರಂ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆ ಮೃತಪಟ್ಟಿದ್ದರು. ಈ ವೇಳೆ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಮಗಳನ್ನು ಮದುವೆ ಮಾಡಿ ಕೊಡುವಂತೆ ರಾಶೀದ್ ಹಲವು ಸಲ ಬೇಡಿಕೊಂಡರೂ ಅದಕ್ಕೆ ತಾಹ ಸಿದ್ದತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇರಿದು ಕೊಲೆಗೈದೆನೆಂದು ಆರೋಪಿ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ
0 Comments