ಬದಿಯಡ್ಕ: ಚೆಂಗಳ ಪಂಚಾಯತು ವ್ಯಾಪ್ತಿಯ ನಾರಂಪಾಡಿ ಪುಂಡೂರು ಪರಿಸರದಲ್ಲಿ ಬೀದಿ ನಾಯಿ ಹಾವಳಿ ವ್ಯಾಪಕವಾಗಿದೆಯೆಂದು ತಿಳಿದು ಬಂದಿದೆ. ನಿನ (ಮಂಗಳವಾರ) ಸಂಜೆ ಎರಡು ಆಡುಗಳನ್ನು ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿವೆ. ಪುಂಡೂರು ಅಜ್ಜಾವರದ ಆಸ್ಯಮ್ಮ ಎಂಬವರ ಹಸುಗಳನ್ನು ಕೊಂದು ಹಾಕಲಾಯಿತು.
ಪುಂಡೂರು ಪರಿಸರದಲ್ಲಿ ಬೀದಿ ನಾಯಿಗಳು ಠಳಾಯಿಸುತ್ತಿದ್ದು ಇದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಮಕ್ಖಳು ಆಟವಾಡಲು ಸಾಧ್ಯವಾಗದ ಸ್ಥಿತಿಯೊದಗಿದೆ. ಬೀದಿ ನಾಯಿಗಳು ಸಾಕು ಕೋಳಿಗಳನ್ನು ಹಿಡಿದು ತಿನ್ನುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಬೀದಿ ನಾಯಿಗಳನ್ನು ಹಿಡಿಯಲು ಅಧಿಕೃತರು ಅಗತ್ಯದ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸಬೇಕಾದೀತೆಂದು ಎಚ್ಚರಿಕೆ ನೀಡಲಾಗಿದೆ
0 Comments