ಕಾಸರಗೋಡು: ಕೇರಳದ ಯುವಜನರನ್ನು ವಯಸ್ಕರನ್ನು ರಾಜ್ಯಾಡಳಿತ ವಂಚಿಸುತ್ತಿದೆಯೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ದೂರಿದರು. ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳನ್ನು ಬುಡಮೇಲುಗೊಳಿಸುವ ರಾಜ್ಯದ ಎಡರಂಗ ಸರಕಾರದ ವಿರುದ್ದ ಬಿಜೆಪಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಅವರು ಈ ರೀತಿ ಹೇಳಿದರು.
70 ವರ್ಷ ದಾಟಿದವರಿಗೆ ಕೇಂದ್ರ ಸರಕಾರ ಜಾರಿಗೊಳಿಸಿದ ಆಯುಷ್ಮಾನ್ ವಿಮಾ ಯೋಜನೆಯ 40 ಶೇಖಡಾ ಪಾಲು ರಾಜ್ಯ ಸರಕಾರ ಪಾವತಿಸಲು ಹಿಂದೇಟು ಹಾಕಿರುವುದರಿಂದಾಗಿ ಆ ಯೋಜನೆ ರಾಜ್ಯದಲ್ಲಿ ಜಾರಿಯಾಗಿಲ್ಲ. ಶಿಕ್ಷಣಕ್ಕಾಗಿ ಇತರ ರಾಜ್ಯಗಳನ್ನು ಆಶ್ರಯಿಸುವ ಯುವಜನರು ಉದ್ಯೋಗ ಪಡೆಯಲು ಸಹ ಅದೇ ದಾರಿ ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಎಂ.ಬಾಲರಾಜ್ ಅಧ್ಯಕ್ಷತೆ ವಹಿಸಿದರು. ನೇತಾರರಾದ ಪಿ.ಆರ್ ಸುನಿಲ್, ಪುಷ್ಪಾ ಗೋಪಾಲನ್, ಸವಿತ ಟೀಚದ್, ಪಿ.ರಮೇಶ್, ಎಂ.ಸಂಜೀವ ಶೆಟ್ಟಿ, ಎಂ.ಭಾಸ್ಕರನ್, ಮಧೂರು ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಗೋಪಾಲಕೃಷ್ಣ, ಬೆಳ್ಳೂರು ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀಧರ ಬೆಳ್ಳೂರು, ಸತೀಶ್ಚಂದ್ರ ಭಂಡಾರಿ, ಕೆ.ರಾಜಗೋಪಾಲ್, ಲೋಕೇಶ್ ನೋಂಡಾ, ಕೆ.ಎಂ.ಅಶ್ವಿನಿ ಮೊದಲಾದವರು ಭಾಷಣ ಮಾಡಿದರು. ಪ್ರಮಿಳಾ ಮಜಲ್ ಸ್ವಾಗತಿಸಿ ಮಹೇಶ್ ಗೋಪಾಲ್ ವಂದಿಸಿದರು.
0 Comments