Ticker

6/recent/ticker-posts

ರಾಷ್ಟ್ರೀಯ ಹೆದ್ದಾರಿ ಪೊಸೋಟ್ ನಲ್ಲಿ ಕಾರು ಡಿಕ್ಕಿ ಹೊಡೆದು ಯುವಕ ಮೃತ್ಯು


 ಮಂಜೇಶ್ವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ  ಕಾರು ಡಿಕ್ಕಿಹೊಡೆದು ಉಂಟಾದ  ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ನಡೆದಿದೆ. ವಾಮಂಜೂರು ಕಜೆ ನಿವಾಸಿ ಮುಹಮ್ಮದ್ ಸಾದಿಕ್(40) ಮೃತಪಟ್ಟ ಯುವಕ. ನಿನ್ನೆ (ಸೋಮವಾರ) ರಾತ್ರಿ ಪೊಸೋಟ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಕೂಡಲೇ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ದಿವಂಗತ ಮೂಸ ಕುಞಯ ಪುತ್ರರಾದ ಮೃತರು ತಾಯಿ ಮರಿಯನ್ನು, ಸಹೋದರ ಸಹೋದರಿಯರಾದ ಅಬ್ದುಲ್ಲ, ಖಾದರ್,ತಾಹಿರ, ಅವ್ವಾಬಿ, ಖದೀಜ, ಹಾಜಿರ ಎಂಬಿವರನ್ನು ಅಗಲಿದ್ದಾರೆ

Post a Comment

0 Comments