ಕಾಸರಗೋಡು: 175 ಲೀಟರ್ ಗೋವಾ ನಿರ್ಮಿತ ವಿದೇಶ ಮದ್ಯ ಸಹಿತ ಮಹಿಳೆಯನ್ನು ಎಕ್ಸೈಸ್ ಅಧಿಕಾರಿಗಳು ಬಂಧಿಸಿದ್ದಾರೆ.ತೆಕ್ಕಿಲ್ ವಿಲೇಜ್ ವ್ಯಾಪ್ತಿಯ ಪರಂಬ ಚೆರುಕರ ನಿವಾಸಿ ವಿನಿತ(36) ಬಂಧಿತಳಾದ ಮಹಿಳೆ. ಈ ಪ್ರಕರಣದ ಒಂದನೇ ಆರೋಪಿ ಎನ್.ವಿನೋದ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.
ಸೋಮವಾರ ಮದ್ಯಾಹ್ನ 12.30 ರ ವೇಳೆ ಎಕ್ಸೈಸ್ ಎನ್ಫೋರ್ಸ್ ಮೆಂಟ್ ಅಂಡ್ ಆಂಟಿ ನಾರ್ಕೊಟಿಕ್ ಸ್ಪೆಶಲ್ ಸ್ಕ್ವಾಡ್ ಕಾರ್ಯಾಚರಣೆ ನಡೆಸಿದೆ. ಎಕ್ಸೈಸ್ ಇನ್ಸ್ಪೆಕ್ಟರ್ ಕೆ.ವಿ.ಸುರೇಶ್ ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ 20 ಪೆಟ್ಟಿಗೆಗಳಲ್ಲಿ ತುಂಬಿಸಿಟ್ಟಿದ್ದ 175.68 ಲೀಟರ್ ಮದ್ಯ ಪತ್ತೆಹಚ್ಚಲಾಗಿದೆ. ಇದೀಗ ತಲೆಮರೆಸಿಕೊಂಡಿರುವ ಒಂದನೇ ಆರೋಪಿ ವಿನೋದ್ ಕುಮಾರ್, ಈ ಹಿಂದೆ ಮಂಜೇಶ್ವರ ಚೆಕ್ ಪೋಸ್ಟ್ ಮೂಲಕ 2484 ಲೀಟರ್ ಮದ್ಯ ಸಾಗಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಎಕ್ಸೈಸ್ ಅಧಿಕಾರಿಗಳಾದ ಸೋನು ಸೆಬಾಸ್ಟಿಯನ್, ಅಥುಲ್ ಟಿ.ವಿ, ಶಿಜಿತ್.ವಿ.ವಿ, ರೀನ.ವಿ, ಧನ್ಯ ಟಿ.ವಿ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು
0 Comments