Ticker

6/recent/ticker-posts

ಕೆಟ್ಟುಂಕಲ್ಲು ಸುಪರ್ ಮಾರ್ಕೆಟಿನಿಂದ 25 ಸಾವಿರ ರೂ ಬೆಲೆಯ ಮೊಬೈಲು ಕಳವುಗೈದ ಆರೋಪಿಯ ಸೆರೆ


 ಮುಳ್ಳೇರಿಯ: ಸುಪರ್ ಮಾರ್ಕೆಟಿನಿಂದ ಫೋನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ‌ ಉಪ್ಪಳ ಕಣ್ಣಾಡಿಪಾರ ನಿವಾಸಿ ಸಿ.ಎ.ಸಲೀಂ(41) ಬಂಧಿತ ಆರೋಪಿ. ಜುಲೈ 18 ರಂದು ಮದ್ಯಾಹ್ನ 2 ಗಂಟೆಯ ವೇಳೆ ಕೆಟ್ಟುಂಕಲ್ಲಿನಲ್ಲಿರುವ ಸುಪರ್ ಮಾರ್ಕೆಟಿನಿಂದ 25 ಸಾವಿರ ರೂ ಬೆಲೆಯ ಮೊಬೈಲು ಪೋನ್ ಕಳವುಗೈಯ್ಯಲಾಗಿತ್ತು. ಸುಪರ್ ಮಾರ್ಕೆಟ್ ಮಾಲಕ ಚೆರ್ಕಳ ಕೆ.ಕೆ.ಪುರ ನಿವಾಸಿ ಮುಹಮ್ಮದ್ ನೀಡಿದ ದೂರಿನಂತೆ  ಆದೂರು ಪೊಲೀಸರು ಕೇಸು ದಾಖಲಿಸಿದರು. ಸಿ.ಸಿ.ಟಿ.ವಿ.ದೃಶ್ಯಗಳನ್ನು ಪರಿಶೋಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಕಳವುಗೈದ ಮೊಬೈಲು ಫೋನ್ ಕಾಸರಗೋಡು ಚಕ್ಕರಬಜಾರಿನ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದನು

Post a Comment

0 Comments