Ticker

6/recent/ticker-posts

ಕಾರಿನಲ್ಲಿ ಸಾಗಿಸುತ್ತಿದ್ದ 272.16 ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯ ಬೆನ್ನಟ್ಟಿ ವಶ ಪಡಿಸಿದ ಎಕ್ಸೈಸ್, ಆರೋಪಿಗಳು ಪರಾರಿ


 ಕಾಸರಗೋಡು:  ಕಾರಿನಲ್ಲಿ ಸಾಗಿಸುತ್ತಿದ್ದ 272.16 ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯವನ್ನು ಕಾಸರಗೋಡು ಚೌಕಿ, ಸಿ‌ಪಿ.ಸಿ.ಆರ್.ಐ. ಪರಿಸರದಿಂದ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಕ್ಸೈಸ್ ಎನ್ಫೋರ್ಸ್ ಮೆಂಟ್ & ಆಂಟಿ ನರ್ಕೋಟಿಕ್ ಸ್ಪೆಶಲ್ ತಂಡ ಹಾಗೂ ಎಕ್ಸೈಸ್ ಸರ್ಕಲ್ ಆಪೀಸ್ ತಂಡದ ನೇತೃತ್ವದಲ್ಲಿ ಕುಂಬಳೆ ಆರಿಕ್ಕಾಡಿ ಬಳಿ ವಾಹನ ತಪಾಸಣೆ ನಡೆಸುವ ವೇಳೆ ಕಾರೊಂದು ನಿಲ್ಲಿಸದೆ ಪರಾರಿಯಾಗಿತ್ತು. 

ಈ ಕಾರನ್ನು ಬೆನ್ನಟ್ಟಿ ಚೌಕಿ ಪರಿಸರದಿಂದ ಹಿಡಿದಾಗ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ವಶಪಡಿಸಲಾಗಿದೆ. ಕಾರಿನಲ್ಲಿದ್ದವರು ಓಡಿ ಪರಾರಿಯಾದರು. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಜಿತ್ ಕೆ.ಆರ್, ಸುಧೀಂದ್ರನ್ ಎಂ.ವಿ, ಮಂಜುನಾಥ ವಿ, ಅಥುಲ್ ಟಿ.ವಿ, ಸೋನು ಸೆಬಾಸ್ಟಿಯನ್, ಸಿಜಿನ್ ಸಿ,  ರೀನ.ವಿ, ಸತ್ಯನ್ ಕೆ.ಮೊದಲಾದವರು ಭಾಗವಹಿಸಿದರು

Post a Comment

0 Comments