Ticker

6/recent/ticker-posts

ಧರ್ಮಸ್ಥಳ ಭಜನಾ ಪರಿಷತ್ತಿನಿಂದ 8 ನೇ ವರ್ಷದ ಮನೆ ಮನೆ ಭಜನಾ ಅಭಿಯಾನಕ್ಕೆ ಚಾಲನೆ


 ಕಾಸರಗೋಡು : ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಇದರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಸಲಾಗುವ ಒಂದು ತಿಂಗಳ ಕಾಲ ರಾಮಾಯಣ ಮಾಸಾಚರಣೆಯ ಮನೆ ಮನೆ ಭಜನೆಯು ಕಾಳ್ಯಂಗಾಡು ನಿವಾಸಿ ಪುಷ್ಪರಾಜ್ ಹೇಮಲತ ಅವರ ನಿವಾಸದಲ್ಲಿ ಭಜನಾ ಪರಿಷತ್ತಿನ ಗೌರವಾಧ್ಯಕ್ಷರಾದ ಜಯಾನಂದ ಹೊಸದುರ್ಗ  ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಅಧ್ಯಕ್ಷರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ ನೇತೃತ್ವ ವಹಿಸಿದರು. ಸಂಕೀರ್ತನಾ ಮಹಿಳಾ ಭಕ್ತವೃಂದ ಮತ್ತು ಶ್ರೀ ಶಕ್ತಿ ಬಾಲವೃಂದ ಉಳಿಯತ್ತಡ್ಕ ಇವರಿಂದ ಭಜನೆ ಸೇವೆ ಜರಗಿತು. ಈ ಸಂದರ್ಭದಲ್ಲಿ  ತುಕಾರಾಮ ಆಚಾರ್ಯ ಕೆರೆಮನೆ,ಅಚ್ಚುತ ಆಚಾರ್ಯ ಕೂಡ್ಲು, ಯಶೋಧ, ಶೋಭ, ಸವಿತ, ನೇತ್ರಾವತಿ, ಜಯಂತಿ, ದೃಶ್ಯ, ಚರಿಷ್ಮಾ ಹಾಗೂ ಮನೆಯವರು ಪರಿಸರದ ಭಕ್ತರು ಉಪಸ್ಥಿತರಿದ್ದರು.

Post a Comment

0 Comments