Ticker

6/recent/ticker-posts

ಗಾಡಿಗುಡ್ಡೆ ಶ್ರೀಕೃಷ್ಣ ಜನ್ಮಾಷ್ಟಮಿ ಆಮಂತ್ರಣ ಪತ್ರಿಕೆ ಬಿಡುಗಡೆ


ಮುಳ್ಳೇರಿಯ : ಗಾಡಿಗುಡ್ಡೆ ಭಾರತಾಂಬಾ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ಗಾಡಿಗುಡ್ಡೆ ಶ್ರೀ ಭಾರತಾಂಬಾ ಭಜನಾ ಮಂದಿರದಲ್ಲಿ 2025 ಅಗಸ್ಟ್ 17 ನೇ ಆದಿತ್ಯವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗಾಡಿಗುಡ್ಡೆ ಭಾರತಿ ಸದನದಲ್ಲಿ ಜರಗಿತು.

ಆಮಂತ್ರಣ ಪತ್ರಿಕೆಯನ್ನು ನಿವೃತ ಶಿಕ್ಷಣಾಧಿಕಾರಿ ಹಾಗೂ ಗಾಡಿಗುಡ್ಡೆ  ಶ್ರೀ ಭಾರತಾಂಬಾ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ ರೈ ಬಿಡುಗಡೆಗೊಳಿಸಿದರು. 

ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಸೇವಾ ಸಮಿತಿ ಉಪಾಧ್ಯಕ್ಷರಾದ ದಾಮೋದರ ಎ, ಕಾರ್ಯದರ್ಶಿ ಚಿದಾನಂದ ರೈ,  ರಾಜೇಶ್ ಶೆಟ್ಟಿ ಮೊದಲಾದವರು ಮಾತನಾಡಿದರು.  

ಕ್ಲಬ್ ನ ಉಪಾಧ್ಯಕ್ಷರಾದ ರಮೇಶ್ ಯಾದವ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಲಬ್ ನ ಕಾರ್ಯದರ್ಶಿ ಸುಮಿತ್ ರೈ ಸ್ವಾಗತಿಸಿ,  ಮೋಕ್ಷಿತ್ ಕುಮಾರ್ ರೈ ವಂಧಿಸಿದರು.

Post a Comment

0 Comments