ಕಾಸರಗೋಡು: ದನ ಮೇಯಿಸಲು ಮನೆಯ ಸಮೀಪದ ಬಯಲಿಗೆ ಹೋದ ವ್ಯಕ್ತಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೋಳಿಯಡ್ಕಂ ಪಚ್ಚಿಲಂಲರ ನಿವಾಸಿ ಕುಞುಂಡನ್ ನಾಯರ್(75) ಮೃತಪಟ್ಟ ವ್ಯಕ್ತಿ. ಇಂದು (ಸೋಮವಾರ) ಬೆಳಗ್ಗೆ 10 ಗಂಟೆಯ ವೇಳೆ ಈ ಘಟನೆ ನಡೆದಿದೆ.
ಎಂದಿನಂತೆ ಇಂದು ಬೆಳಗ್ಗೆ ಕುಞಂಡನ್ ನಾಯರ್ ದನ ಮೇಯಿಸಲು ಮನೆಯ ಸಮೀಪದಲ್ಲೇ ಇರುವ ಬಯಲಿಗೆ ಹೋಗಿದ್ದರು. ಹೊತ್ತು ತಡವಾಗಿಯೂ ಅವರು ಹಿಂತಿರುಗದ ಹಿನ್ನೆಲೆಯಲ್ಲಿ ಪುತ್ರ ರಾಜನ್ ಹೋಗಿ ನೋಡಿದಾಗ ಕುಞಂಡನ್ ನಾಯರ್ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ಬಿದ್ದರುವುದು ಕಂಡು ಬಂತು. ಸಮೀಪದಲ್ಲೇ ದನವೂ ಬಿದ್ದಿತ್ತು. ಕೂಡಲೇ ವಿದ್ಯುತ್ ಸಂಪರ್ಕ ಕಡಿದು ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಮೃತಪಟ್ಟಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ರಾಜನ್, ಶಾಂತ, ಶ್ಯಾಮಲ, ರಾಜೇಶ್ವರಿ ಎಂಬಿವರನ್ನು ಅಗಲಿದ್ದಾರೆ
0 Comments