Ticker

6/recent/ticker-posts

ಬೆಲೆ ಏರಿಕೆಯ ವಿರುದ್ದ ತಾಲೂಕು ಕಚೇರಿ ಮುಂದೆ ಗಂಜಿ ಬೇಯಿಸಿ ಪ್ರತಿಭಟಿಸಿದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು; ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್.ಉದ್ಘಾಟನೆ

ಕಾಸರಗೋಡು: ಕೇರಳದ  ಬೆಲೆಯೇರಿಕೆಯು ಪಿಣರಾಯಿ ಸರಕಾರ ನಿರ್ಮಿತ ದುರಂತವೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ದೂರಿದ್ದಾರೆ. ಬೆಲೆಯೇರಿಕೆಯ ಹೊಣೆಯಿಂದ ಪಲಾಯನಗೈಯ್ಯಲು ಪಿಣರಾಯಿ ತಂಡವನ್ನು ಬಿಡಲಾರೆಯೆಂದು ಅವರು ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರತಿಭಟಿಸಿ ಮಹಿಳಾ ಮೋರ್ಚಾ ಆಶ್ರಯದಲ್ಲಿ ಕಾಸರಗೋಡು ತಾಲೂಕು ಕಚೇರಿ ಮುಂಭಾಗದಲ್ಲಿ  ಗಂಜಿ ಬೇಯಿಸಿ ನಡೆಸಿದ ಪ್ರತಿಭಟನೆ ಉದ್ಘಾಟಿಸಿ ಅವರು ಈ ರೀತಿ ಹೇಳಿದರು.
 ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್,  ಇತರರಾದ ಸವಿತ ಟೀಚರ್, ವೀಣ ಅರುಣ್ ಶೆಟ್ಟಿ, ಸೌಮ್ಯ, ರಮಣಿ ಮೊದಲಾದವರು ಮಾತನಾಡಿದರು. ಬಿಜೆಪಿ ನೇತಾರರು, ಕಾರ್ಯಕರ್ತರು, ಹಿತೈಷಿಗಳು, ಜನಪ್ರತಿನಿಧಿಗಳು ಭಾಗವಹಿಸಿದರು.

Post a Comment

0 Comments