Ticker

6/recent/ticker-posts

ಬದಿಯಡ್ಕ ಪೇಟೆಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ರೋಗಿಯನ್ನು ಮಂಜೇಶ್ವರದ ಸ್ನೇಹಾಲಯಕ್ಕೆ ಕೊಂಡೊಯ್ದ ವ್ಯಾಪಾರಿ ಪದಾಧಿಕಾರಿಗಳು


 ಬದಿಯಡ್ಕ: ಇಲ್ಲಿನ ಪೇಟೆ ಪರಿಸರದಲ್ಲಿ ‌ಮಾನಸಿಕ ರೋಗಿಯೋರ್ವ ಕೆಲವು ದಿನಗಳಿಂದ ಅಂಗಡಿಗಳ ವದಾಂಡದಲ್ಲಿ‌ ಮಲಗುತ್ತಿದ್ದು ಆಹಾರ ಕೊಟ್ಟರೆ ಸ್ವೀಕರಿಸುತ್ತಿರಲಿಲ್ಲ. ಇಂತಹ ವ್ಯಕ್ತಿಯನ್ನು ಮಂಜೇಶ್ವರದಲ್ಲಿ‌ ಕಾರ್ಯಾಚರಿಸುತ್ತಿರುವ ಸ್ನೇಹಾಲಯಕ್ಕೆ ಕೊಂಡೊಯ್ಯಲಾಯಿತು.


  ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಯುನಿಟ್ ಉಪಾಧ್ಯಕ್ಷ  ರಾಜು ಸ್ಟೀಫನ್ ಕ್ರಾಸ್ತ, ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ,  ಸದಸ್ಯರುಗಳಾದ ಅವಿನಾಶ್ ರೈ, ಹನೀಫ ಲೈವ್, ಅಖಿಲೇಶ್ ನಗುಮುಗಂ  ಮೊದಲಾದವರು ನೇತೃತ್ವ ವಹಿಸಿದರು. ವ್ಯಾಪಾರಿಗಳ ಚಟುವಟಿಕೆಯು ಶ್ಲಾಘನೆಗೆ ಕಾರಣವಾಗಿದೆ.

Post a Comment

0 Comments