Ticker

6/recent/ticker-posts

Ad Code

ಕಾರಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿಯ ಎಂಡಿಎಂಎ : ಅಪಘಾತ ನಡೆದಾಗ ಬೆಳಕಿಗೆ ಬಂದ ಪ್ರಕರಣ

 

ಮಂಗಳೂರು: ಟ್ಯಾಂಕರ್‌ನ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ತಲಪಾಡಿಯಲ್ಲಿ  ನಡೆದಿದೆ. ಈ ವೇಳೆ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಿಷೇಧಿತ ಎಂಡಿಎಂಎ ಸಾಗಿಸುತ್ತಿರುವುದು ತಿಳಿದು ಬಂದಿದೆ. ಗಾಯಗೊಂಡವರನ್ನು ಉಪ್ಪಳದ ಪಳ್ಳಂ ಸಿದ್ದೀಕ್ ಮತ್ತು ಮಣಿಮುಂಡ ಆದಂ ಎಂದು ಗುರುತಿಸಲಾಗಿದೆ. ಸ್ಥಳೀಯ ನಿವಾಸಿಗಳು ಆಂಬ್ಯುಲೆನ್ಸ್ ನಲ್ಲಿ  ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ  ಸಾಗಿಸಿದ ಬಳಿಕ ಕಾರಿನೊಳಗೆ ಅನುಮಾನಾಸ್ಪದ ವಸ್ತುಗಳನ್ನು ಕಂಡದ್ದರಿಂದ  ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ  ಕಾರ್ಯಪ್ರವೃತ್ತರಾದ ಸಂಚಾರ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ಕಾರಿನಲ್ಲಿದ್ದ 130 ನಿಷೇಧಿತ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.  ಈ ಮಾದಕ ವಸ್ತುವಿನ ಮೌಲ್ಯವು ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

Post a Comment

0 Comments