ಕಾಸರಗೋಡು : ಸ್ಥಳಿಯಾಡಳಿತ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಡಿ.26, 27ರಂದು ನಡೆಯಲಿದೆ. ನಗರಸಭೆಗಳ ಚೇರ್ ಪರ್ಸನ್ ಚುನಾವಣೆ 26ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಉಪಾಧ್ಯಕ್ಷರ ಆಯ್ಕೆ ಅಪರಾಹ್ನ 2.30ಕ್ಕೆ ನಡೆಯಲಿದೆ. ಉಳಿದಂತೆ ಗ್ರಾ.ಪಂ, ಬ್ಲಾಕ್. ಪಂ, ಜಿ. ಪಂ ಅಧ್ಯಕ್ಷರ ಚುನಾವಣೆ 27ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಉಪಾಧ್ಯಕ್ಷರ ಆಯ್ಕೆ ಅಂದೇ ಅಪರಾಹ್ನ 2.30ಕ್ಕೂ ನಡೆಯಲಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಯಾ ಚುನಾವಣಾಧಿಕಾರಿಗಳ ಸಮಕ್ಷಮ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆಗೆ ಒಂದಕ್ಕಿಂತ ಅಧಿಕ ಅಭ್ಯರ್ಥಿಗಳು ಹಕ್ಕು ಮಂಡಿಸಿದರೆ ಸದಸ್ಯರ ಮುಕ್ತ ಮತದಾನದ ಮೂಲಕ ಆಯ್ಕೆ ನಡೆಯಲಿದೆ.

0 Comments