ಪೊಲೀಸ್ ಅಧಿಕಾರಿಯೊಬ್ಬರು ಚಲಾಯಿಸುತ್ತಿದ್ದ ವಾಹನವು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಮಲಪ್ಪುರಂನ ಪಾಂಡಿಕ್ಕಾಡ್‌ನಲ್ಲಿ ನಡೆದಿದೆ. ಪಾಂಡಿಕ್ಕಾಡ್ ಠಾಣೆಯ ಅಧಿಕಾರಿ ಸಿಪಿಒ ವಿ.ರಜೀಶ್ ಚಲಾಯಿಸುತ್ತಿದ್ದ ವಾಹನವು ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಸ್ಥಳೀಯರು ಸೇರಿದಾಗ ಅಧಿಕಾರಿ ಕುಡಿತದ ಅಮಲಿನಲ್ಲಿದ್ದರು ಎನ್ನಲಾಗಿದೆ. ರಜೀಶ್ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡರು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಮಲಪ್ಪುರಂನ ಪಾಂಡಿಕ್ಕಾಡ್‌ನಲ್ಲಿ ಈ ಘಟನೆ ನಡೆದಿದೆ. ರಜೀಶ್ ಚಲಾಯಿಸುತ್ತಿದ್ದ ವಾಹನವು ಇದಕ್ಕಿಂತ ಮೊದಲು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಪ್ರಯಾಣಿಕ ಉರುಳಿ ಬಿದ್ದ ನಂತರ, ರಜೀಶ್ ನಿಲ್ಲಿಸದೆ ಕರುವರಕುಂಡು ಕಡೆಗೆ ತಿರುಗಿಸಿದ್ದರು. ಈ ವೇಳೆ ಕಾರಿಗೆ ಮತ್ತು ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಸ್ಥಳೀಯರು ಒಗ್ಗೂಡಿದ್ದು ಈ ವೇಳೆ ಅಪಘಾತಕ್ಕೆ ಕಾರಣ ತಾನು ಅಲ್ಲ ಎಂದು ಅಧಿಕಾರಿ ಆರಂಭದಲ್ಲಿ ಹೇಳಿಕೊಂಡರು. ಹೆಚ್ಚಿನ ಪೊಲೀಸ್ ಅಧಿಕಾರಿಗಳು ಆಗಮಿಸಿ ರಜೀಶ್ ಅವರನ್ನು ವಶಕ್ಕೆ ಪಡೆದರು. ಗಾಯಾಳುಗಳಲ್ಲಿ ಒಬ್ಬರನ್ನು ಮಂಜೇರಿ ವೈದ್ಯಕೀಯ ಕಾಲೇಜಿಗೆ ಮತ್ತು ಇನ್ನೊಬ್ಬರನ್ನು ಪೆರಿಂಥಲ್ಮನ್ನಾಗೆ ಕರೆದೊಯ್ಯಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅಪಘಾತಗಳ ನಂತರ ಈ ರಸ್ತೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

0 Comments