Ticker

6/recent/ticker-posts

Ad Code

ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಬರಿಮಲೆ ಯಾತ್ರಿಕರ ಕಾರಿಗೆ ಬೈಕ್ ಡಿಕ್ಕಿ : ಸವಾರನಿಗೆ ಗಂಭೀರ

ಮಂಜೇಶ್ವರ: ಶಬರಿಮಲೆಗೆ ತೆರಳಿ ಮರಳುತ್ತಿದ್ದ ಕಾರಿಗೆ ಬೈಕ್‌  ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉದ್ಯಾವರ  10ನೇ ಮೈಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸೋಮವಾರ ಬೆಳಗಿನ ಜಾವ 1 ಗಂಟೆಗೆ ಈ ಅಪಘಾತ ಸಂಭವಿಸಿದೆ. ಗಾಯಾಳು ಹೇರೂರು ಮೂಲದ ಮೊಹಮ್ಮದ್ ಅಶ್ರಫ್ (31) ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶ್ರಫ್ ತಲಪ್ಪಾಡಿಯಿಂದ ಉಪ್ಪಳ ಭಾಗಕ್ಕೆ ಬೈಕ್‌ನಲ್ಲಿ ಬರುತ್ತಿದ್ದರು. ಅಯ್ಯಪ್ಪ ಭಕ್ತರು ಪ್ರಯಾಣಿಸುತ್ತಿದ್ದ ಕಾರು ಕಾಸರಗೋಡಿನಿಂದ ಮಂಗಳೂರಿಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments