ಕಾಞಂಗಾಡ್: ಸ್ಥಳೀಯಾಡಳಿತ ಚುನಾವಣೆಯ ದಿನದಂದು ಹೊಸದುರ್ಗ ಇನ್ಸ್ಪೆಕ್ಟರ್ ಅನೂಪ್ ಕುಮಾರ್ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಚುನಾಯಿತ ಪಂಚಾಯತ್ ಸದಸ್ಯನೋರ್ವನನ್ನು ಬಂಧಿಸಲಾಗಿದೆ. ಅಜಾನೂರು ಪಂಚಾಯತ್ನ 24ನೇ ವಾರ್ಡಿನಿಂದ ಗೆದ್ದ ಮುಸ್ಲಿಂ ಲೀಗ್ನ ಸಿ.ಎಚ್. ನಿಜಾಮುದ್ದೀನ್ ಅವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಚಿತ್ತಾರಿ ಹಿಮಾಯತುಲ್ ಯುಪಿ ಶಾಲೆಯ ಬೂತ್ನಲ್ಲಿ ಎಡರಂಗದ ಏಜೆಂಟ್ಗಳಾದ ಐಎನ್ಎಲ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಪೊಲೀಸ್ ತಂಡ ಶಾಲೆಗೆ ತಲುಪಿದಾಗ ಯುಡಿಎಫ್ ಕಾರ್ಯಕರ್ತರು ಜಮಾಯಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಪ್ರಕರಣ ದಾಖಲಿಸಲಾಗಿತ್ತು. ನಿಜಾಮುದ್ದೀನ್ ಸೇರಿದಂತೆ 19 ಯುಡಿಎಫ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಿಜಾಮುದ್ದೀನ್ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಮರುದಿನ ಇದನ್ನು ಪರಿಗಣಿಸಲಿರುವಾಗಲೇ ಬಂಧನ ನಡೆದಿದೆ.

0 Comments