ಪೆರ್ಲ : ಬಜಕೂಡ್ಲು ಏರೋಟಿ ಶ್ರೀ ಧೂಮಾವತೀ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ಹಾಗೂ ಪರಿವಾರ ದೈವಗಳ ನೇಮೋತ್ಸವ ಡಿಸೆಂಬರ್ 21 ಆದಿತ್ಯವಾರ ಮತ್ತು ಡಿ.22 ಸೋಮವಾರ ಜರಗಲಿದೆ. ಕಾರ್ಯಕ್ರಮದಂಗವಾಗಿ ಡಿ.21ಕ್ಕೆ ಸಂಜೆ 6 ಗಂಟೆಗೆ ಶ್ರೀ ಧೂಮಾವತಿ ದೈವದ ಭಂಡಾರ ತೆಗೆಯುವುದು, 7 ಗಂಟೆಗೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ಬಜಕೂಡ್ಲುಇವರಿಂದ ಭಜನೆ, ರಾತ್ರಿ ಗಂಟೆ 8.30ಕ್ಕೆ ಪರಿವಾರ ದೈವದ ಕೋಲ, 9.30ಕ್ಕೆ ಪ್ರಸಾದ ಭೋಜನ. ಡಿ. 22ರಂದು ಬೆಳಿಗ್ಗೆ ಗಂಟೆ 10 ರಿಂದ 11 ಗಂಟೆ ತನಕ ಶ್ರೀ ಅಯ್ಯಪ್ಪಸ್ವಾಮೀ ಭಜನಾ ಸಂಘ ಪೆರ್ಲ ಅವರಿಂದ ಭಜನೆ, ಮಧ್ಯಾಹ್ನ 11.30 ಗಂಟೆಯಿಂದ ಶ್ರೀ ಧೂಮಾವತಿ ದೈವದ ಕೋಲ ಪ್ರಸಾದ ವಿತರಣೆ, ಸಂಜೆ 4 ಗಂಟೆಗೆ ಪುರಿ ನಾಗಬನದಲ್ಲಿ ನಾಗ ತಂಬಿಲ, ರಾತ್ರಿ ಗಂಟೆ 8ರಿಂದ ಶ್ರೀ ಗುಳಿಗ ಭಂಡಾರ ಕೊಟ್ಯದಲ್ಲಿ ಶ್ರೀ ಗುಳಿಗ ದೈವದ ಕೋಲದೊಂದಿಗೆ ಸಮಾಪ್ತಿಗೊಳ್ಳಲಿದೆ.

0 Comments