Ticker

6/recent/ticker-posts

Ad Code

ದೇಲಂಪಾಡಿಯಿಂದ ನಾಪತ್ತೆಯಾದ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಿ ಮಗುವನ್ನು ಪತಿಗೆ ಒಪ್ಪಿಸಿ ಪ್ರಿಯತಮನ ಜತೆ‌ ಮನೆಗೆ

 

ಕಾಸರಗೋಡು : ನಾಲ್ಕೂವರೆ ವಯಸ್ಸಿನ ಮಗಳ ಜತೆ ದೇಲಂಪಾಡಿಯ ಮಯ್ಯಾಳದಿಂದ ನಾಪತ್ತೆಯಾದ ಗೃಹಿಣಿ ಪ್ರಿಯತಮನ ಜತೆ ಕಾಸರಗೋಡು ನ್ಯಾಯಾಲಯದಲ್ಲಿ ಹಾಜರಾಗಿದ್ದಾಳೆ.  ದೇಲಂಪಾಡಿ ಮಯ್ಯಾಳ ನಿವಾಸಿ ಎಸ್. ಎ. ಕಾವ್ಯ (25) ಪ್ರಿಯತಮನಾದ ಅಣ್ಣಪಾಡಿ ನಿವಾಸಿ ಅಶ್ವಥ್ ಜತೆ ನ್ಯಾಯಾಲಯಕ್ಕೆ ಹಾಜರಾದವಳಾಗಿದ್ದಾಳೆ.

ದಿನಾಂಕ 22ರಂದು ಬೆಳಿಗ್ಗೆ ಕಾವ್ಯ ಮಗುವನ್ನು ಜತೆಗೆ ಕೊಂಡೊಯ್ದು ನಾಪತ್ತೆಯಾಗಿದ್ದಳು. ಮನೆಗೆ ಮರಳಿ ಬಾರದೇ ಇದ್ದ ಹಿನ್ನೆಲೆಯಲ್ಲಿ ಪತಿ ಆದೂರು ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಪ್ರಿಯತಮ ಅಶ್ವಥ್ ಜತೆ ತಲೆಮರೆಸಿಕೊಂಡಿರುವ ಶಂಕೆ ಉಲ್ಲೇಖಿಸಲಾಗಿತ್ತು. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸುತ್ತಿರುವಂತೆಯೇ ಇವರು ನ್ಯಾಯಾಲಯಕ್ಕೆ ಹಾಜರಾದರು.ನ್ಯಾಯಾಲಯ ಸ್ವ ಇಚ್ಛೆಯ ನಿರ್ಧಾರಕ್ಕೆ ಅವಕಾಶ ಇತ್ತಾಗ ಮಗುವನ್ನು ಪತಿಗೆ ಒಪ್ಪಿಸಿ ಮಹಿಳೆ ಪ್ರಿಯತಮನ ಜತೆ ತೆರಳಿದಳು.

Post a Comment

0 Comments