ದುಬೈ: ಯುಎಇಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಜನರ ಸುರಕ್ಷತೆಗಾಗಿ ದುಬೈ ಮತ್ತು ಅಜ್ಮಾನ್‌ನಲ್ಲಿರುವ ಎಲ್ಲಾ ಸಾರ್ವಜನಿಕ ಪಾರ್ಕ್ ಮತ್ತು ಬೀಚ್ ಗಳನ್ನು ಮುಚ್ಚಲಾಗಿದೆ. ಶುಕ್ರವಾರ (ಡಿಸೆಂಬರ್ 18 ಮತ್ತು 19)ಈ ನಿರ್ಬಂಧಗಳು ಜಾರಿಯಲ್ಲಿರುತ್ತವೆ. ಮುಂಬರುವ ಗಂಟೆಗಳಲ್ಲಿ ಹವಾಮಾನ ಹದಗೆಡುವ ಸಾಧ್ಯತೆಯ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದುಬೈ ನಗರಪಾಲಿಕೆ ತಿಳಿಸಿದೆ. ಹವಾಮಾನವು ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಫ್ಲೈ ದುಬೈ ಪ್ರಯಾಣಿಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ. ರಸ್ತೆಗಳಲ್ಲಿ ನೀರು ನಿಲ್ಲುವಿಕೆ ಮತ್ತು ಸಂಚಾರ ದಟ್ಟಣೆಯನ್ನು ಪರಿಗಣಿಸಿ, ಅವರು ವಿಮಾನ ನಿರ್ಗಮನಕ್ಕೆ ಕನಿಷ್ಠ 4 ಗಂಟೆಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪಬೇಕು. ಆನ್‌ಲೈನ್ ಚೆಕ್-ಇನ್ ಸೌಲಭ್ಯವನ್ನು ಗರಿಷ್ಠವಾಗಿ ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ. ಶಾರ್ಜಾದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ವಾಹನಗಳು ಅವುಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಪೊಲೀಸರು ಸೂಚಿಸಿದ್ದಾರೆ.

0 Comments